ಪಾವಗಡ :
ಪಾವಗಡದ ಗ್ರಾಮವೊಂದರಲ್ಲಿ ಚರಂಡಿ ದುರ್ನಾತಕ್ಕೆ ಜನ ಹಲವು ಮಾರಕ ಕಾಯಿಲೆಗಳಿಗೆ ತುತ್ತಾಗ್ತಿದಾರೆ. ಆದರೆ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ, ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿದೆ ನಿರ್ಲಕ್ಷ್ಯ ತೋರುತ್ತಿದೆ ಅಂತ ಪ್ರಜಾಶಕ್ತಿ ಮಾಧ್ಯಮ ಸುದ್ದಿ ಬಿತ್ತರಿಸಿತ್ತು. ಇನ್ನು ಪ್ರಜಾಶಕ್ತಿ ಟಿವಿಯ ಒಂದೇ ಒಂದು ವರದಿಗೆ ಅಧಿಕಾರಿಗಳು ಗ್ರಾಮಕ್ಕೆ ಎದ್ನೋಬಿದ್ನೋ ಅಂತ ಓಡೋಡಿ ಬಂದ ತಹಶೀಲ್ದಾರ್ ಮತ್ತು ಇಓ ಮುಂದೆ ನಿಂತು ಸ್ವಚ್ಚತೆ ಮಾಡಿಸ್ತಿದ್ದಾರೆ.
ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಚಿಕ್ಕಜಾಲಾಡು ಗ್ರಾಮದಲ್ಲಿ ಚರಂಡಿಯ ನೀರೆಲ್ಲ ರಸ್ತೆಯ ಮೇಲೆ ನಿಲ್ಲುತ್ತಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಅಂತ ಗ್ರಾಮಸ್ಥರು ತಮ್ಮ ಅಳಲನ್ನು ಪ್ರಜಾಶಕ್ತಿ ಮಾಧ್ಯಮದ ಮುಂದೆ ತೋಡ್ಕೊಂಡಿದ್ದರು. ಅದರಂತೆ ನಿಮ್ಮ ಪ್ರಜಾಶಕ್ತಿ ವರದಿ ಮಾಡಿತ್ತು. ವರದಿ ಮಾಡಿದ ಒಂದೇ ಒಂದು ದಿನದಲ್ಲಿಯೇ ತಹಶೀಲ್ದಾರ್ ವರದರಾಜು ಮತ್ತು ಇಓ ಜಾನಕಿ ರಾಮ್ ಸ್ಥಳಕ್ಕೆ ಭೇಟಿ ನೀಡಿ ಸ್ವತಃ ಅವರೇ ಮುಂದೆ ನಿಂತು ಸ್ವಚ್ಛತಾ ಕಾರ್ಯ ಮಾಡಿಸ್ತಾ ಇದ್ದಾರೆ.
ಈ ಹಿಂದೆ ಈ ಗ್ರಾಮದಲ್ಲಿ ಚರಂಡಿ ನಿರ್ಮಾಣಕ್ಕೆಂದು ಗ್ರಾಮ ಪಂಚಾಯ್ತಿಯವರು ಮುಂದಾಗಿದ್ದರು. ಆದರೆ ಚರಂಡಿ ನಿರ್ಮಾಣದ ಸ್ಥಳದ ಪಕ್ಕದಲ್ಲಿಯೇ ಇದ್ದ ಜಾಗದ ವ್ಯಕ್ತಿ ಚರಂಡಿ ಮಾಡದಂತೆ ಅಡ್ಡಿಪಡಿಸಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿತ್ತು. ಇದರಿಂದ ಚರಂಡಿಯ ನೀರು ಹರಿಯಲು ಜಾಗವಿಲ್ಲದೆ ರಸ್ತೆಯ ಮೇಲೆ ನೀರು ನಿಂತು ಗಬ್ಬೆದ್ದು ನಾರುತ್ತಿತ್ತು. ಈ ಕಾರಣಕ್ಕೆ ಚಿಕ್ಕಜಾಲಾಡು ಗ್ರಾಮದ ಜನರು ಹಲವು ಕಾಯಿಲೆಗಳಿಗೆ ತುತ್ತಾಗ್ತಿದ್ದರು. ಇನ್ನು ಈ ವರದಿಗೆ ಎಚ್ಚೆತ್ತ ತಹಶೀಲ್ದಾರ್ ವರದರಾಜು ಮತ್ತು ಇಓ ಜಾನಕಿ ರಾಮ್ ಚರಂಡಿ ಕ್ಲೀನ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ನಿಮ್ಮ ಪ್ರಜಾಶಕ್ತಿ ಮಾಧ್ಯಮದ ಫಲಶ್ರುತಿಯಾಗಿದೆ.