ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ದೇವಾಲಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಭೇಟಿ ನೀಡಿದ್ದ ಭಕ್ತಾಧಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದ್ದು. ಹೆಜ್ಜೆನು ದಾಳಿಯಿಂದ ಗಾಯಗೊಂಡಿದ್ದವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ರೀ ರಾಮ ನವಮಿ ಹಿನ್ನಲೆ ಇತಿಹಾಸ ಪ್ರಸಿದ್ದ ರಂಗಸ್ಥಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ರಾಮನವಮಿ ಹಿನ್ನೆಲೆ ದೂರದ ಊರುಗಳಿಂದ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸಿದ್ರು. ಈ ವೇಳೆ ಇದ್ದಕ್ಕಿಂತಯೇ ಜೇನುನೋಣಗಳು ಭಕ್ತಾಧಿಗಳ ಮೇಲೆ ದಾಳಿ ಮಾಡಿದ್ದು. ಹೆಜ್ಜೇನು ದಾಳಿ ಮಾಡ್ತಿದಂತೆ ಅಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಇನ್ನು ಹೆಜ್ಜೇನು ದಾಳಿಯಿಂದ ಸುಮಾರು 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ವೈದ್ಯರುಗಾಯಾಳುಗಳಿಗೆ ಯಾವುದೇ ರೀತಿಯ ಗಂಭೀರ ಅಪಾಯದ ಭಯವಿಲ್ಲ ಎಂದು ತಿಳಿಸಿದ್ದಾರೆ. ದೇವಸ್ಥಾನದಲ್ಲಿ ಹೆಜ್ಜೇನು ಕಟ್ಟಿದ್ದು ದೇವಸ್ಥಾನದಲ್ಲಿ ಓಡಾಡುವವರ ಮೇಲೆ ಅಟ್ಯಾಕ್ ಮಾಡ್ತಿದೆ. ಹೀಗಾಗಿ ಹೆಜ್ಜೇನುಗಳನ್ನು ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.