ಶಿರಾ:
ಶಿರಾದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬುಧವಾರ ತಾಲೂಕಿನಾದ್ಯಂತ ಎಲ್ಲಾ ಶಿವಾಲಯಗಳಲ್ಲಿ ಪರಮೇಶ್ವರನಿಗೆ ಬೆಳಗಿನಿಂದ ಅಹೋರಾತ್ರಿ ವಿಶೇಷ ಪೂಜೆ, ರುದ್ರ, ಶಿವಸ್ತುತಿ ಜತೆಗೆ ವರ್ಣರಂಜಿತ ಪುಷ್ಪಾಲಂಕಾರ ಮಾಡಲಾಗಿತ್ತು. ಶಿರಾದಲ್ಲಿ ಶಿವರಾತ್ರಿ ಸಂಭ್ರಮ ಭಕ್ತರು ಶಿವ ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ ಸಮರ್ಪಣೆಯಲ್ಲಿ ಪಾಲ್ಗೊಂಡರು.
ನಗರದ ಕೊಳದಪ್ಪಲೇಶ್ವರ, ದೊಡ್ಡ ಕೆರೆ ಪಲೇಶ್ವರ,ಸೇರಿದಂತೆ ತಾಲ್ಲೂಕಿನ ವಿವಿಧ ಶಿವನದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಅಹೋರಾತ್ರಿ ಪೂಜಾ ಕಾರ್ಯಗಳು ಶಾಸ್ತ್ರೋಕ್ತವಾಗಿ ಮಾಡಲಾಯಿತು. ಬುಧವಾರ ಬೆಳಗಿನಿಂದಲೂ ಸಾರ್ವಜನಿಕರು ಶಿವನ ದರ್ಶನದೊಂದಿಗೆ ಧನ್ಯತೆ ಪಡೆದು ದೇವಾಲಯದಲ್ಲಿ ಗಂಟೆಗಟ್ಟಲೆ ಸರತಿಯಲ್ಲಿ ನಿಂತ ಸಹಸ್ರಾರು ಭಕ್ತರು ಶಿವದರ್ಶನ ಪಡೆದರು. ದೇವಾಲಯಕ್ಕೆ ಭೇಟಿ ನೀಡಿದ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ಕೈಗೊಂಡಿದ್ದರು. ಶಿವದೇವಾಲಯದಲ್ಲಿ ವಿಶೇಷಪೂಜೆ, ಸಾಂಪ್ರದಾಯಿಕ ವಿಧಿ-ವಿಧಾನಗಳು, ಭಜನೆ, ಸಂಗೀತ ಕಾರ್ಯಕ್ರಮ ನಡೆದವು.