ರಾಮನಗರ : ಹತ್ಯೆಯಾದ ಬಾಲಕಿ ಮನೆಗೆ ಭೇಟಿ ಕೊಟ್ಟ ಸಂಸದ ಡಾ. ಮಂಜುನಾಥ್

ರಾಮನಗರ :

ರಾಮನಗರದ ಬಿಡದಿಯ ಭದ್ರಾಪುರ ಗ್ರಾಮದ 14 ವರ್ಷದ ವಿಕಲಚೇತನ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣ ಹಿನ್ನಲೆ ಇಂದು ಸಂಸದ ಡಾ. ಮಂಜುನಾಥ್‌ ಭದ್ರಾಪುರ ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇನ್ನು ಬಾಲಕಿಯ ಸಾವಿನ ಬಗ್ಗೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪೊಲೀಸರು ಕೆಲ ಸಾಕ್ಷ್ಯಗಳನ್ನು ಎಫ್‌ಎಸ್‌ಎಲ್‌ ಗೆ ಕಳುಹಿಸಿದ್ದಾರೆ.

ಇಂದು ಭದ್ರಾಪುರ ಗ್ರಾಮಕ್ಕೆ ಸಂಸದ ಡಾ. ಮಂಜುನಾಥ್‌ ಅವರು ಭೇಟಿಯನ್ನು ನೀಡಿ ಮೃತ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿ ಧ್ಯೆರ್ಯವನ್ನು ತುಂಬಿದ್ದಾರೆ. ಇನ್ನು ಘಟನೆ ಕುರಿತು ಪೊಲೀಸ್‌ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಾಲಕಿಯ ಮೇಲೆ ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದು ಮರಣೋತ್ತರ ವರದಿ ಮತ್ತು ಎಫ್‌ಎಸ್‌ಎಲ್‌ ವರದಿಯಲ್ಲಿ ತಿಳಿಯಬೇಕಿದ್ದು, ಪೊಲೀಸರು ವಿವಿಧ ಆಯಾಮಗಳನ್ನು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಎರಡು-ಮೂರು ತಂಡಗಳನ್ನು ಮಾಡಿಕೊಂಡು ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಸಾವಿಗೆ ನ್ಯಾಯವನ್ನು ಕೊಡಿಸುವುದಕ್ಕೆ ಸಂಸದರು ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದ್ದಾರೆ. ಬಾಲಕಿ ಸಾವಿನ ಸುತ್ತ ಅನುಮಾನಗಳು, ಬೆಳದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಲಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews