ಶಿರಾ:
ಪ್ರಜಾಶಕ್ತಿ ಟಿವಿ ತುಮಕೂರು ಜನರ ನಾಡಿ ಮಿಡಿತವಾಗಿ ಕೆಲಸ ಮಾಡ್ತಾ ಇದ್ದು, ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡ್ತಾ ಇದೆ. ಹೌದು ಶಿರಾ ತಾಲ್ಲೂಕಿನ ಚಿಕ್ಕ ಬಾಣಗೆರೆಯಲ್ಲಿ ಸರ್ಕಾರಿ ಗೋ ಶಾಲೆಯಲ್ಲಿ ನಿರ್ವಹಣೆ ಕೊರತೆ ಹಾಗೂ ಆರ್ಥಿಕ ನೆರವಿನಿಂದ ಗೋ ಶಾಲೆಯಲ್ಲಿದ್ದ ಗೋವುಗಳು ಸೊರಗುತ್ತಿದ್ದವು. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಈ ಬಗ್ಗೆ ಪ್ರಜಾಶಕ್ತಿ ಟಿವಿ ವಿಸ್ತೃತವಾಗಿ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರು ಸೇರಿ ಇಲಾಖೆಯ ಅಧಿಕಾರಿಗಳು ಗೋ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಗೋ ಶಾಲೆಯಲ್ಲಿ ನಿರ್ವಹಣೆ ಕೊರತೆಯಿಂದ ಸೊರಗುತ್ತಿರೋದನ್ನು ಅಧಿಕಾರಿಗಳು ಅರಿತು ಇಂದು ಕ್ರಮಕ್ಕೆ ಮುಂದಾಗಿದ್ದಾರೆ.