SHIVAMOGGA NEWS : ಶಿವಮೊಗ್ಗದ ಆದಿಚುಂಚನಗಿರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಜನಾ ಎಸ್. SSLC ಪರೀಕ್ಷೆ-2 ರಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಹಿಂದಿನ ಫಲಿತಾಂಶದ ವೇಳೆ ಸಂಜನಾ 624 ಅಂಕ ಗಳಿಸಿದ್ದರು. ವಿಜ್ಞಾನ ವಿಷಯದಲ್ಲಿ ಕೇವಲ ಒಂದು ಅಂಕ ಕಡಿಮೆ ಬಂದಿದ್ದ ಕಾರಣ, ರಾಜ್ಯದ ಟಾಪರ್ ಆಗುವ ಅವಕಾಶದಿಂದ ವಂಚಿತರಾಗಿದ್ದರು. ಆದರೂ ಹಿಮ್ಮೆಟ್ಟದೆ, ಮತ್ತೊಮ್ಮೆ ವಿಜ್ಞಾನ ವಿಷಯದ ಪರೀಕ್ಷೆ ಬರೆಯುವ ಮೂಲಕ 80ಕ್ಕೆ 80 ಅಂಕ ಪಡೆದು ಪೂರ್ಣ ಅಂಕ ಗಳಿಸುವ ಸಾಧನೆ ಮಾಡಿದ್ದಾರೆ.
ಸಂಜನಾ ತಂದೆ ಸುರೇಶ್.ಎಂ ಪೊಲೀಸ್ ಇಲಾಖೆಯಲ್ಲಿ ಎಸ್‌ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ರೇಖಾ.ಎಸ್ ಗೃಹಿಣಿಯಾಗಿದ್ದಾರೆ. ಮಗುವಿನ ಈ ಸಾಧನೆಗೆ ಹೆಮ್ಮೆಯ ಮಕ್ಕಳಾಗಿ ನಿಂತಿದ್ದಾರೆ. ಸಂಜನಾಳ ಅಚ್ಚುಕಟ್ಟಾದ ಶಿಸ್ತಿನ ಓದು, ಗುರಿಗೆ ನಂಬಿಕೆ, ಹಾಗೂ ಮರುಪ್ರಯತ್ನದ ದಿಟ್ಟ ನಡೆ ಇಂದಿನ ಯುವ ತಲೆಮಾರಿಗೆ ಪ್ರೇರಣೆಯಾಗಿದೆ.