KOLAR: ಕೋಲಾರ ನಗರದ ಎಸ್ಎನ್ಆರ್ (SNR) ಜಿಲ್ಲಾಸ್ಪತ್ರೆಯಲ್ಲಿ ಮನಕಲಕುವ ಘಟನೆ ನಡೆದಿದೆ. 19 ವರ್ಷದ ಯುವತಿ ಮೌನಿಕಾ, ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿ ಹೆರಿಗೆ ಆದ ಬಳಿಕ, ಮಗುವನ್ನು ಅಲ್ಲಿಯೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಜೂನ್ 12 ರಂದು ಹೆರಿಗೆಗಾಗಿ ಆಸ್ಪತ್ರೆ ಸೇರಿದ ಮೌನಿಕಾ, ಹೆಣ್ಣು ಮಗುವನ್ನು ಜನಿಸಿದ ನಂತರ, ಯಾವುದೇ ಮಾಹಿತಿ ನೀಡದೆ ಟೀ ಕುಡಿದು ಬರೋದಾಗಿ ಹೇಳಿ ಆಸ್ಪತ್ರೆಯಲ್ಲೇ ಮಗು ಬಿಟ್ಟು ನಾಪತ್ತೆಯಾಗಿದ್ದಾಳೆ. ವಿಳಾಸ ಸೇರಿದಂತೆ ಯಾವುದೇ ದಾಖಲಾತಿ ನೀಡದೇ ಕುಟುಂಬದ ಮದುವೆಗೆ ಬಂದಿದ್ದೆ ಹೆರಿಗೆ ನೋವು ಎಂದು ನಾರ್ಮಲ್ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಮಾನವೀಯತೆ ದೃಷ್ಠಿಯಿಂದ ವೈದ್ಯರು ಹೆರಿಗೆ ಮಾಡಿಸಿದ್ದರು. ಆದರೆ ಹೆರಿಗೆ ನಂತರ ಆಕೆ ನಾನು ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರದವಳು ಎಂದು ಹೇಳಿ ಮೊಬೈಲ್ ನಂಬರ್ ಸಹ ಸುಳ್ಳು ಮಾಹಿತಿ ನೀಡಿದ್ದಾಳೆ.
ಆಸ್ಪತ್ರೆಯ ಸಿಬ್ಬಂದಿ ಮಗುವಿಗೆ ಬೇರೆ ತಾಯಿಯಿಂದ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಇನ್ನು ಕೋಲಾರ ನಗರ ಪೊಲೀಸರು ಸಿಸಿಟಿವಿ ಆಧರಿಸಿ ತಾಯಿಗಾಗಿ ಹುಡುಕಾಟ ಆರಂಭಿಸಿದ್ದಾರೆ.