ಶಿರಾ:
ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿವೆಯೋ ಗೊತ್ತಿಲ್ಲ.. ಪೊಲೀಸರು ಅದೆಷ್ಟು ವಾರ್ನಿಂಗ್ ಕೊಟ್ರು ಕೂಡು ವ್ಹೀಲಿಂಗ್ ಮಾಡುವವರು ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಇದೀಗ ಶಿರಾ ಪೊಲೀಸರು ವ್ಹೀಲಿಂಗ್ ಪುಂಡರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ, ಶಿರಾ ನಗರದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮಿತಿ ಮೀರಿದ್ದು, ಅಪಾಯಕಾರಿ ವ್ಹೀಲಿಂಗ್ ಮಾಡಿದ್ದವರಿಗೆ ಪೊಲೀಸರು ಪಾಠ ಕಲಿಸುವ ಕೆಲಸ ಮಾಡಿದ್ದಾರೆ.
ಶಿರಾ ತಾಲೂಕಿನ ತಾವರೆಕೆರೆ ಪೋಲೀಸರು ಮೂರು ಬೈಕ್‌ಗಳನ್ನು ಸೀಜ್ ಮಾಡಲಾಗಿದೆ. ಹೌದು ಶಿರಾ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಪುಂಡರು ರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದಲ್ಲದೇ, ಆ ವಿಡಿಯೋವನ್ನು ಸೋಶಿಯಲ್ ವಿಡಿಯೋದಲ್ಲಿ ಶೇರ್ ಮಾಡಲಾಗಿತ್ತು. ಇದನ್ನು ಗಮನಿಸಿದ ವ್ಹೀಲಿಂಗ್ ಪುಂಡರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡ ತಾವರೆಕೆರೆ ಪೊಲೀಸರು ವ್ಹೀಲಿಂಗ್ ಮಾಡ್ತಿದ್ದ ಯುವಕರನ್ನು ಬಂಧಿಸಿ, ಬೈಕ್‌ಗಳನ್ನು ಸೀಜ್ ಮಾಡಿದ್ದಾರೆ. ಅಲ್ದೇ ಯುವಕರಿಗೆ 5000 ದಂಡ ವಿಧಿಸಿ ಮತ್ತೊಮ್ಮೆ ವ್ಹೀಲಿಂಗ್ ಮಾಡದಂತೆ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.