ಕ್ರಿಕೆಟ್‌: ನರೇಂದ್ರ ಮೋದಿಯನ್ನು ಕೊಂಡಾಡಿದ ಸಚಿನ್ ತೆಂಡೂಲ್ಕರ್

ಕ್ರಿಕೆಟ್‌ :

ಆಪರೇಷನ್ ಸಿಂಧೂರದ ಯಶಸ್ವಿಗೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ತಂಡಗಳ ಕುರಿತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರಶಂಸೆಯ ಬರಹವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಪರೇಷನ್ ಸಿಂಧೂರದ ಕಾರ್ಯಚರಣೆಯಲ್ಲಿ 1.6 ಬಿಲಿಯನ್‌ಗಿಂತಲೂ ಹೆಚ್ಚು ಜನರು ಒಗ್ಗಟ್ಟಿನಿಂದ ಹೋರಾಡಿದ್ದಾರೆ. ಭಾರತೀಯ  ಸೇನೆ ಬಲವಾದ ದೃಢನಿಶ್ಚಯ ಮತ್ತು ಸಂಯಮದಿಂದ ಹೋರಾಡಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಮೂರು ರಕ್ಷಣಾ ತಂಡಗಳ ಅವಿಶ್ರಾಂತ ಪರಿಶ್ರಮವು ಗಮನಾರ್ಹವಾಗಿದೆ. ಧೈರ್ಯಶಾಲಿ  ಸೈನಿಕರು ಹಾಗೂ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ  ನಾಗರಿಕರ ಬಗ್ಗೆ ಇಲ್ಲಿ  ನಾನು ವಿಶೇಷವಾಗಿ  ಉಲ್ಲೇಖಿ ಸುತ್ತಿದ್ದೇನೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

Author:

...
Keerthana J

Copy Editor

prajashakthi tv

share
No Reviews