ಮಧುಗಿರಿ : ಲಂಚ ಪಡೆಯುವ ವೇಳೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿಗಳು

ಮಧುಗಿರಿ :

ಭ್ರಷ್ಟ ಅಧಿಕಾರಿಗಳು ಲಂಚ ಪಡೆಯುವಾಗಲೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, ಲೋಕಾಯುಕ್ತ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ. ಮಧುಗಿರಿ ತಾಲೂಕಿನ ಕೊಡ್ಲಾಪುರ ಗ್ರಾಮ ಪಂಚಾಯ್ತಿಯಲ್ಲಿ ಲಂಚಾವತಾರದ ಬಗ್ಗೆ ಕಂಪ್ಲೇಟ್‌ ಬಂದ ಬೆನ್ನಲ್ಲೇ ಅಲರ್ಟ್‌ ಆದ ಲೋಕಾ ಅಧಿಕಾರಿಗಳು ಏಕಾಏಕಿ ರೇಡ್‌ ಮಾಡಿದ್ದಾರೆ.

ಮಧ್ಯಾಹ್ನ 1 ಒಂದು ಗಂಟೆ ಸುಮಾರಿಗೆ ಮಧುಗಿರಿ ತಾಲೂಕಿನ ಕೊಡ್ಲಾಪುರ ಗ್ರಾಮ ಪಂಚಾಯಿತಿಯ ಮೇಲೆ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ರೇಡ್‌ ಮಾಡಿದ್ದಾರೆ. ಈ ವೇಳೆ ಲಂಚ ಪಡೆಯುವಾಗಲೇ ರೆಡ್‌ ಹ್ಯಾಂಡ್‌ ಆಗಿ ಪಿಡಿಒ ಹಾಗೂ ಬಿಲ್‌ ಕಲೆಕ್ಟರ್‌ ಲೋಕಾ ಬಲೆಗೆ ಬಿದ್ದಿದ್ದಾರೆ. ಕೊಡ್ಲಾಪುರ ಗ್ರಾಮದ ಪಿಡಿಒ ಪುಂಡಪ್ಪ ಹಾಗೂ ಬಿಲ್‌ ಕಲೆಕ್ಟರ್‌ ಹನುಮಂತರಾಯಪ್ಪ ಲೋಕಾ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ಈ ಇಬ್ಬರು ಅಧಿಕಾರಿಗಳು ಇ- ಖಾತಾ ನೀಡಲು ಆರೂವರೆ ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಕೆಎಚ್ ಆನಂದಕುಮಾರ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ತುಮಕೂರಿನ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಪಡೆಯುವಾಗ ರೆಡ್‌ಹ್ಯಾಂಡ್‌ ಆಗಿ ಪಿಡಿಒ ಸಿಕ್ಕಿಬಿದ್ದಿದ್ದಾನೆ.

ಇನ್ನು ಮಧ್ಯಾಹ್ನ 1 ಗಂಟೆಯಿಂದ ಸಂಜೆವರೆಗೂ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಹಲವು ಕಡತಗಳನ್ನು ಪರಿಶೀಲನೆ ನಡೆಸಿದ್ದು, ಲಂಚ ಪಡೆದ ಹಣವನ್ನು ಸೀಜ್‌ ಮಾಡಿ ಲಂಚಾಧಿಕಾರಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews