ಸಿನಿಮಾ : ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ರಾಕಿಂಗ್‌ ಸ್ಟಾರ್ ಯಶ್‌

ಸಿನಿಮಾ: 

ತೆರೆಕಂಡು ಮೂರು ವರ್ಷಗಳಾದರೂ ಕೆಜಿಎಫ್ ಚಾಪ್ಟರ್-2 ಚಿತ್ರವೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿಯೇ ಉಳಿದಿದೆ. ಇದೀಗ ಈ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 3’ ಕುರಿತಾಗಿ ದೊಡ್ಡ ಸುಳಿವು ನೀಡಿದೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-1 ಮತ್ತು ಚಾಪ್ಟರ್-2 ಪ್ಯಾನ್ ಇಂಡಿಯಾ  ಲೆವೆಲ್‌ನಲ್ಲಿ ಭಾರೀ ಯಶಸ್ಸು ಕಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುವುದರ ಜೊತೆಗೆ, ಈ ಸಿನಿಮಾ  ವಿದೇಶಗಳಲ್ಲಿಯೂ  ಶಬ್ದ ಮೂಡಿಸಿತು.

ಅಭಿಮಾನಿಗಳು ‘ಕೆಜಿಎಫ್ 3’ ಯಾವಾಗ ಶುರುವಾಗುತ್ತದೆ ಎಂದು ತಾತ್ಸಾರದಿಂದ ಕಾಯುತ್ತಿದ್ದರೆ, ಈಗ ಹೊಂಬಾಳೆ ಫಿಲ್ಮ್ಸ್  ತನ್ನ  ಇನ್‌ ಸ್ಟಾಗ್ರಾಂ ಖಾತೆಯಲ್ಲಿ ವಿಶೇಷ ಎಐ ವಿಡಿಯೋ ಹಂಚಿಕೊಂಡು ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

ಈ ಎಐ ವಿಡಿಯೋ ಮೂಲಕ ನಿರ್ಮಾಪಕರು 'ಕೆಜಿಎಫ್ 3’ ಪ್ಲಾನಿಂಗ್ ಹಂತದಲ್ಲಿದೆ ಎಂಬ ಸಿಕ್ಕ ಸಿಗ್ನಲ್ ನೀಡಿದಂತಾಗಿದೆ. ಇದರಿಂದಾಗಿ  ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ನರಾಚಿʼ ದ್ವಾರದಿಂದ ಆರಂಭವಾಗುವ ಈ ವಿಡಿಯೋ ಕೆಜಿಎಫ್‌-2ನಲ್ಲಿ ರಾಕಿ ಭಾಯ್‌ ಹಡಗಿನ ಪೂರ್ತಿ ಚಿನ್ನ ತುಂಬಿಕೊಂಡು ಸಮುದ್ರದ ಮಧ್ಯೆ ನಿಲ್ಲುವವರೆಗೆ ಸಾಗುತ್ತದೆ.ಕೆಜಿಎಫ್‌ ಚಾಪ್ಟರ್‌-1ನಲ್ಲಿ ಯಶ್‌ ನರಾಚಿಗೆ ಎಂಟ್ರಿಕೊಟ್ಟಾಗಿನಿಂದ ಇಡೀ ಕೆಜಿಎಫ್‌ ಸಾಮ್ರಾಜ್ಯಕ್ಕೆ ಸಾಮ್ರಾಟನಾದವರೆಗಿನ ಕಥೆಯನ್ನ ಈ ವಿಡಿಯೋನಲ್ಲಿ ಕಟ್ಟಿಕೊಡಲಾಗಿದೆ. ಅಲ್ಲದೇ ವಿಡಿಯೋ ಕೆಳಗೆ ʻನೀವು ರಾಕಿ ಭಾಯ್ ಜೊತೆಗೆ ಮುಂದುವರಿಯಿರಿ, ಇದು ಯಾರೂ ನಿಯಂತ್ರಿಸಲಾಗದ ಶಕ್ತಿʼ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

ಹೊಂಬಾಳೆ ಫಿಲ್ಮ್ಸ್‌ನ ಈ ವಿಡಿಯೋ ರಿಲೀಸ್‌ ಆಗ್ತಿದ್ದಂತೆ ಯಶ್‌ ಅಭಿಮಾನಿಗಳು ಸಖತ್‌ ಖುಷಿಯಲ್ಲಿದ್ದಾರೆ, ಕೆಜಿಎಫ್‌-3 ಯಾವಾಗ ಬರುತ್ತೆ? ಯಶ್‌ ಅವ್ರನ್ನ ಯಾವಾಗ ರಾಖಿಭಾಯ್‌ ಅವತಾರದಲ್ಲಿ ನೋಡ್ತೀವಿ ಅಂತೆಲ್ಲ ಕಾಮೆಂಟ್‌ನಲ್ಲಿ ಪ್ರಶ್ನೆ ಕೇಳ್ತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews