India :
ಪಹಲ್ಗಾಮ್ ದಾಳಿ ಬಳಿಕ ಪಾಕ್ ಹಾಗೂ ಭಾರತದ ನಡುವೆ ಯುದ್ಧ ಆರಂಭವಾಗಿತ್ತು. ಎರಡು ಮೂರು ದಿನಗಳ ಕಾಲ ನಡೆದ ಯುದ್ಧಕ್ಕೆ ಪಾಪಿ ಪಾಕಿಸ್ತಾನ ಅಕ್ಷರಶಃ ವಿಲವಿಲ ಆಗಿತ್ತು. ಭಾರತದ ದಾಳಿಗೆ ತತ್ತರಿಸಿದ್ದ ಪಾಕ್ ಮಂಡಿಯೂರಿ ಕದನ ವಿರಾಮದ ಮೊರೆ ಹೋಗಿತ್ತು. ಅದರಂತೆ ನಿನ್ನೆ ಸಂಜೆ 5 ಗಂಟೆಗೆ ಕದನ ವಿರಾಮ ಕೂಡ ಘೋಷಣೆ ಆಗಿತ್ತು. ಹಾಗಾಗಿ ರಜೆಯಲ್ಲಿದ್ದ ದೇಶದ ಸೈನಿಕರು ಇನ್ನು ಸ್ವಲ್ಪ ದಿನ ಕುಟುಂಬಸ್ಥರ ಜೊತೆ ಕಾಲ ಕಳೆಯಬಹುದು ಎಂದು ಖುಷಿಯಲ್ಲಿದ್ದ ಸೈನಿಕರಿಗೆ ಸೇವೆಗೆ ಹಾಜರಾಗುವಂತೆ ಆದೇಶ ನೀಡಲಾಗಿದೆ. ಪಾಕ್ ವಿರುದ್ಧ ತೊಡೆತಟ್ಟಿ ನಿಂತ ಭಾರತೀಯ ಸೈನಿಕರು ನಮಗೆ ಮನೆಯವರಿಗಿಂತ ದೇಶವೇ ಮುಖ್ಯ ಅಂತಾ ಯುದ್ಧದ ನಾಡಿಗೆ ಹಾರಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಯೋಧ ಕನ್ಯಾಕುಮಾರ್ ಚವ್ಹಾಣ್ ತಾಯಿಗೆ ಅನಾರೋಗ್ಯ ಹಾಗೂ ತಂಗಿಯ ಮದುವೆಗೆಂದು 1 ತಿಂಗಳು ರಜೆ ಪಡೆದು ತಾಯ್ನಾಡಿಗೆ ಬಂದಿದ್ದರು. ಆದರೆ ಯುದ್ಧ ತಾರಕ್ಕೇರುತ್ತಿದ್ದಂತೆ ಇದೇ ತಿಂಗಳ 19 ರಂದು ಇರೋ ತಂಗಿಯ ಮದುವೆ ಮಾಡುವುದನ್ನು ಬಿಟ್ಟಿ, ಮದುವೆಗಿಂತ ದೇಶ ಸೇವೆಯೇ ಮುಖ್ಯ ಅಂತಾ ಗಡಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಗಂಡನನ್ನು ಕಳುಹಿಸಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಪತ್ನಿ ಕಣ್ಣೀರಾಧಾರೆಯನ್ನೇ ಹರಿಸಿದರು. ಒಂದು ಕ್ಷಣ ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಭಾವರಾದ ಕ್ಷಣಕ್ಕೆ ಸಾಕ್ಷಿಯಾಯ್ತು.
ಇತ್ತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೈನಿಕ ವೆಂಕಟೇಶ್ ಎಂಬುವವರು ಮೇ 1 ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ಯೋಧ ವೆಂಕಟೇಶ್ ಹಾಗೂ ಪ್ರಭಾ ನವ ದಂಪತಿ ಹನಿಮೂನಿಗೆ ಊಟಿಗೆ ತೆರಳಲು ಪ್ಲಾನ್ ಮಾಡಿದ್ದರು. ಮೈಸೂರಿನವರೆಗೂ ಪ್ರಯಾಣ ಬೆಳೆಸಿದ್ದ ವೆಂಕಟೇಶ್‌ಗೆ ದೇಶ ಸೇವೆಗೆ ಹಾಜರಾಗುವಂತೆ ಕರೆ ಬಂದಿತ್ತು. ಈ ಕೂಡಲೇ ಹನಿಮೂನ್‌ನನ್ನು ಕ್ಯಾನ್ಸಲ್ ಮಾಡಿ ಊರಿಗೆ ವಾಪಸ್ ತೆರಳಿ ಪತ್ನಿಯನ್ನು ಬಿಟ್ಟು ಯುದ್ಧ ಭೂಮಿಗೆ ತೆರಳಲು ಸಜ್ಜಾದ್ರು. ದೇಶ ಸೇವೆಗೆ ರೆಡಿಯಾದ ಯೋಧ ವೆಂಕಟೇಶ್‌ಗೆ ಕುಟುಂಬಸ್ಥರು ಧೈರ್ಯ ತುಂಬಿ, ಊರಿನವರೆಲ್ಲಾ ಸೇರಿ ಸನ್ಮಾನ ಮಾಡಿ ಬೀಳ್ಕೊಟ್ಟರು.
ಕಲಬುರಗಿ ಮೂಲದ CRPF ಯೋಧ ಹಣಮಂತರಾಯ್ ಹೆಂಡ್ತಿ ಡಿಲೆವರಿಗಾಗಿ ರಜೆ ಮೇಲೆ ಊರಿಗೆ ಬಂದಿದ್ದರು. ವಾರದ ಹಿಂದೆಯಷ್ಟೇ ಹಣಮಂತರಾಯ್ ಅವರ ಪತ್ನಿಗೆ ಡಿಲೆವರಿ ಆಗಿ ಗಂಡು ಮಗು ಜನನವಾಗಿದೆ. ರಜೆ ಅವಧಿ ಕೇವಲ 15 ದಿನ ಕಳೆದಿದೆ ಅಷ್ಟೇ ಅಷ್ಟರಲ್ಲೀ ಆಗ್ಲೆ ಭಾರತೀಯ ಸೇವೆಗೆ ತುರ್ತಾಗಿ ಹಾಜರಾಗುವಂತೆ ಕರೆ ಬಂದಿದೆ. ಕೂಡಲೇ ಆ ಯೋಧ ತನಗೆ ಮಗು, ಮನೆಯವರಿಗಿಂತ ದೇಶ ಮುಖ್ಯ ಎಂದು ಅಂತಾ ಹೊರಡಲು ಸಜ್ಜಾದ್ರು. ಹೆಂಡ್ತಿ, ಒಂದು ವಾರದ ಮಗು ಹಾಗೂ ಇನ್ನಿಬ್ಬರು ಮಕ್ಕಳನ್ನು ಬಿಟ್ಟು ನಗುತ್ತಲೇ ದೇಶ ಸೇವೆಗೆ ತೆರಳಿದ್ರು. ಸೈನಿಕ ಹಣಮಂತರಾಯ್‌ಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕುಟಂಬವನ್ನು ಸನ್ಮಾನಿಸಿ, ಯೋಧನಿಗೆ ಸಲಾಂ ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಇತ್ತ ಮಹಾರಾಷ್ಟ್ರದ ಜಳಗಾಂವ್ ಮೂಲದ ಯೋಧ ಮನೋಜ್ ಪಾಟೀಲ್ ಮದುವೆ ಸಂಭ್ರಮದಲ್ಲಿದ್ರು. ಮೇ 5ರಂದು ಅದ್ಧೂರಿಯಾಗಿ ಮದುವೆ ಆಗಿದ್ದು, ಪತ್ನಿ ಹಾಗೂ ಕುಟುಂಬಸ್ಥರ ಜೊತೆ ಖುಷಿಯಾಗಿ ರಜೆ ಕಳೆಯುತ್ತಿದ್ರು. ಇತ್ತ ಮದುವೆ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ರೆ, ಅತ್ತ ಭಾರತ- ಪಾಕ್ ಗಡಿಯಲ್ಲಿ ಯುದ್ಧ ಜೋರಾಗಿತ್ತು. ಹೀಗಾಗಿ ದೇಶ ಸೇವೆಯೇ ಮುಖ್ಯ ಅಂತಾ ಪತ್ನಿ ಹಾಗೂ ಕುಟುಂಬವನ್ನು ಬಿಟ್ಟು ಅರಿಶಿಣ ಮೈಯಲ್ಲೇ ದೇಶ ಸೇವೆಗೆ ತೆರಳಲು ಸಿದ್ಧರಾದ್ರೆ, ಯೋಧನ ಕೈ ಹಿಡಿದ ಸಂಗಾತಿ ಯೋಧನಿಗೆ ಧೈರ್ಯ ತುಂಬುತ್ತಾ ನನಗೆ ದೇಶ ಸೇವೆ ಮುಖ್ಯ, ನನ್ನ ಕುಂಕುಮವನ್ನು ಗಡಿಗೆ ಕಳುಹಿಸುತ್ತಿರೋದು ನನಗೆ ಹೆಮ್ಮೆ ಅಂತಾ ಕಣ್ಣೀರಾಕುತ್ತಾ, ತನ್ನ ಗಂಡನನ್ನು ಗಡಿಗೆ ಕಳುಹಿಸಿಕೊಟ್ಟಿದ್ದಾರೆ.
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಬೆನ್ನಲ್ಲೇ ರಜೆಯಲ್ಲಿದ್ದ ಸೈನಿಕರು ತಮ್ಮ ಎಲ್ಲಾ ಕೆಲಸ, ಮನೆ, ಕುಟುಂಬ, ಮಕ್ಕಳನ್ನು ಬಿಟ್ಟು ದೇಶ ಸೇವೆಗೆ ತೆರಳುತ್ತಿದ್ದಾರೆ. ಸೈನಿಕರನ್ನು ಕಳುಹಿಸಲು ರೈಲ್ವೆ ನಿಲ್ದಾಣಗಳಿಗೆ ಬಂದ ಕುಟುಂಸ್ಥರ ಮನದಲ್ಲಿದ್ದ ಯುದ್ಧದಲ್ಲಿ ಏನಾಗುತ್ತೋ ಅನ್ನೋ ಆತಂಕದಲ್ಲೇ ಕಳುಹಿಸಿಕೊಟ್ಟಿದ್ದು, ಎಲ್ಲಕ್ಕೀಂತ ದೇಶ ಸೇವೆಯೇ ಮುಖ್ಯ ಅನ್ನೋದನ್ನ ತಮ್ಮ ಕೆಲಸದಲ್ಲಿ ತೋರಿಸಿದ್ದಾರೆ.