IPL 2025: ತವರಿನಲ್ಲೇ ಕೆಕೆಆರ್ ಗೆ ಮಣ್ಣು ಮುಕ್ಕಿಸಿದ ಆರ್ ಸಿಬಿ

ನಿನ್ನೆ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ರಜತ್ ಪಾಟೀದಾರ್ ಬಳಗ ಇನ್ನೂ 22 ಎಸೆತಗಳಿರುವಾಗಲೇ ಹಾಲಿ ಚಾಂಪಿಯನ್ ವಿರುದ್ಧ 7 ವಿಕೆಟ್ ಗಳಿಂದ ಗೆದ್ದು ಬೀಗಿದೆ. ವಿಶೇಷವೆಂದರೆ ಅಂದು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗಿಳಿದಿದ್ದ ಅನನುಭವಿ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ನಿರಾಸೆಗೊಳಿಸಿದ್ದರು. ಇಂದು ಅದೇ ಕೊಹ್ಲಿ ಅಜೇಯ 59 ರನ್ ಗಳಿಸಿ ವಿಜಯದ ರೂವಾರಿ ಎನ್ನಿಸಿಕೊಂಡರು.

ಕೋಲ್ಕತಾ ತಂಡ ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. 175ರನ್ ಗಳ ಸವಾಲಿನ ಗುರಿ ಪಡೆದ ಆರ್ ಸಿಬಿ ಕೇವಲ 16.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.ಆರ್ ಸಿಬಿ ಪರ ವಿರಾಟ್ ಕೊಹ್ಲಿಯೊಂದಿಗೆ ಆರಂಭಕಾರನಾಗಿ  ಕಣಕ್ಕಿಳಿದ ಇಂಗ್ಲೆಂಡ್  ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಆರಂಭದಿಂದಲೇ ಗುಡುಗಿದರು. ಅವರು ಕೇವಲ 31 ಎಸೆತಗಳಿಂದ 9 ಬೌಂಡರಿ ಮತ್ತು 2 ಸಿಕ್ಸರ್ ಗಳಿಂದ 56 ರನ್ ಗಳಿಸಿ ಆರ್ ಸಿಬಿಯನ್ನು ಡ್ರೈವರ್ ಸೀಟ್ ನಲ್ಲಿ ಕೂರಿಸಿದ್ರು.

ಅದರೊಂದಿಗೆ ವಿರಾಟ್ ಕೊಹ್ಲಿ ಸಹ ಮತ್ತೊಂದು ಬದಿಯಿಂದ ನಿರಂತರವಾಗಿ ರನ್ ಗಳಿಸಿದ್ದರಿಂದ ಕೋಲ್ಕತಾಗೆ ಗಾಯದ ಮೇಲೆ ಬರೆ ಎಳೆದಂತಾಯ್ತು. ಮೊದಲ ವಿಕೆಟ್ ಗೆ ಇವರಿಬ್ಬರು ಕೇವಲ 8.3 ಓವರ್ ಗಳಲ್ಲಿ 95 ರನ್ ಗಳನ್ನು ಪೇರಿಸಿತು. ಎಲ್ಲಾ ಬೌಲರ್ ಗಳನ್ನು ಬೆಂಡೆತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಿದ್ದು ಸ್ಪಿನ್ನರ್ ವರುಣ್ ಚಕ್ರವರ್ತಿ. ಆದರೆ ಮತ್ತೊಂದೆಡೆ ಕೊಹ್ಲಿ ನಿರಂತರ ಬೌಂಡರಿ, ಸಿಕ್ಸರ್ ಗಳನ್ನು ಗಳಿಸಿದ್ದರಿಂದ ಆರ್ ಸಿಬಿಗೆ ಯಾವುದೇ ಸಮಸ್ಯೆಯಾಗಲಿಲ್ಲ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ಮೊದಲ ಓವರ್ ನಲ್ಲೇ ಅಪಾಯಕಾರಿ ಆರಂಭಕಾರ ಕ್ವಿಂಟನ್ ಡಿ ಕಾಕ್ ಅವರನ್ನು ಕಳೆದುಕೊಂಡಿತು. ಆದರೆ ನಾಯಕ ಅಜಿಂಕ್ಯ ರಹಾನೆ ಅವರನ್ನು ಸೇರಿಕೊಂಡ ಮತ್ತೊಬ್ಬ ಆರಂಭಕಾರ ಸುನಿಲ್ ನರೈನ್ 2ನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು. ಕೇವಲ 5.4 ಓವರ್ ಗಳಲ್ಲಿ ತಂಡವನ್ನು 50 ರನ್ ಗಳ ಗಡಿ ದಾಟಿಸಿದ ಇಬ್ಬರೂ9.3 ಓವರ್ ಗಳಲ್ಲಿ 100 ರನ್ ಗಳ ಗಡಿ ದಾಟಿಸಿತು. ಇವರಿಬ್ಬರು ಆಡುವ ಸಂದರ್ಭದಲ್ಲಿ ಕೋಲ್ಕತಾ ತಂಡ ಸುಲಭವಾಗಿ 200 ರನ್ ಗಡಿ ದಾಟಿ ಬಿಡುವ ಸೂಚನೆ ನೀಡಿತ್ತು. ಆದರೆ ಸುನಿಲ್ ನರೈನ್ ವಿಕೆಟ್ ಅನ್ನು ರಸಿಕ್ ಸಲಾಂ ಕಬಳಿಸಿದರೆ, ಅಜಿಂಕ್ಯ ರಹಾನೆ  ಅವರಿಗೆ ಕೃನಾಲ್‌ ಪಾಂಡ್ಯ ಅವರು ಪೆವಿಲಿಯನ್ ದಾರಿ ತೋರಿಸಿದರು. ಅಲ್ಲಿಗೆ ಕೋಲ್ಕತಾ ರನ್ ರೇಟ್ ಕುಸಿಯಿತು. ಎದುರಾಳಿ ಬ್ಯಾಟರ್ ಗಳ ಮೇಲೆ ನಿರಂತರ ಒತ್ತಡ ಹೇರಿದ ಆರ್ ಸಿಬಿ ಬೌಲರ್ ಗಳು ಅಂತಿಮವಾಗಿ 174 ರನ್ ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. 3 ವಿಕಟ್ ಗಳಿಸಿದ ಕೃನಾಲ್ ಪಾಂಡ್ಯ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದರು.

 

Author:

...
Sub Editor

ManyaSoft Admin

share
No Reviews