ವಾಷಿಂಗ್ಟನ್ :
ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಇದರ ಜೊತೆಯಲ್ಲೇ ಜಾಗತಿಕ ಮಟ್ಟದಲ್ಲಿ ಅಮೆರಿಕಗೆ ಭಾರತ ಇನ್ನೊಂದು ಮಹತ್ವದ ಸ್ಥಾನಮಾನ ನೀಡಲು ಈಗ ಮುಂದಾಗಿದೆ.
ಭಾರತ & ಅಮೆರಿಕ ನಡುವೆ ಹಲವು ರೀತಿ ವ್ಯಾಪಾರ ಹಾಗೂ ವ್ಯವಹಾರ ನಡೆಯುತ್ತಿದೆ. ಶಸ್ತ್ರಾಸ್ತ್ರಗಳ ಮಾರಾಟ ಸೇರಿದಂತೆ ಐಟಿ & ಬಿಟಿ ಉದ್ಯಮದಲ್ಲಿ ಕೂಡ ಎರಡೂ ದೇಶಗಳ ನಡುವೆ ಅತ್ಯುತ್ತಮ ಸಂಬಂಧ ಇದೆ. ಇದರ ಜೊತೆಗೆ ಈಗ ಭಾರತದ ಜೊತೆಯಲ್ಲಿ ಟ್ರಂಪ್ ಅವರು ಪ್ರಧಾನಿ ಮೋದಿ ಜೊತೆಗೆ ಮಹತ್ವದ ತೈಲ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಇನ್ನು ಮುಂದೆ ಭಾರತದ ಪ್ರಮುಖ ತೈಲ ಹಾಗೂ ಗ್ಯಾಸ್ ಪೂರೈಕೆದಾರ ದೇಶವಾಗಿ ಅಮೆರಿಕ ಗುರುತಿಸಿಕೊಳ್ಳಲಿದೆ.
ತೈಲ ಕ್ಷೇತ್ರ ಮಾತ್ರವಲ್ಲದೆ, ಭಾರತದ ನ್ಯೂಕ್ಲಿಯರ್ ಎನರ್ಜಿ ಅಂದರೆ ಪರಮಾಣು ಆಧರಿತ ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಅಮೆರಿಕ ಬೇಕಾದ ಕಾನೂನು ತಿದ್ದುಪಡಿ ಮಾಡಲು ಭಾರತ ಒಪ್ಪಿಗೆಯನ್ನು ಸೂಚಿಸಿದೆ. ಇದರ ಜೊತೆಗೆ ಭಾರತ & ಅಮೆರಿಕ ನಡುವೆ ವ್ಯಾಪಾರದ ಒಟ್ಟು ಮೊತ್ತವನ್ನು 2030ರ ಒಳಗೆ 500 ಬಿಲಿಯನ್ ಡಾಲರ್‌ಗೆ ಏರಿಕೆ ಮಾಡಲು ಎರಡೂ ದೇಶಗಳು ಒಪ್ಪಿಗೆ ಸೂಚಿವೆ. ಇದರ ಜೊತೆಗೆ F-35 ಜೆಟ್ ಖರೀದಿ ಬಗ್ಗೆ ಕೂಡ ಈ ಸಮಯದಲ್ಲಿ ಅಂತಿಮ ಒಪ್ಪಂದಕ್ಕೆ ಬರಲಾಗಿದೆ.
ಒಟ್ಟಿನಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಮತ್ತೊಂದು ಕಡೆ ಎರಡೂ ದೇಶಗಳ ಈ ಮಾತುಕತೆ ಜಗತ್ತಿನ ಗಮನ ಸೆಳೆದಿದೆ. ಹಾಗೂ ಟ್ರಂಪ್ ಭೇಟಿಯ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ " ಟ್ರಂಪ್ ಅವರ ಜೊತೆಗಿನ ಭೇಟಿ ಅತ್ಯುತ್ತಮವಾಗಿತ್ತು. ಈ ಮಾತುಕತೆ ಭಾರತ ಹಾಗೂ ಅಮೆರಿಕ ನಡುವಣ ಸ್ನೇಹಕ್ಕೆ ಮತ್ತಷ್ಟು ವೇಗ ತುಂಬಲಿದೆ" ಎಂದು ಬರೆದುಕೊಂಡಿದ್ದಾರೆ.