ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ಮುಂದಿನ ವಾರ ಸಮಾಪ್ತಿಗೊಳ್ಳಲಿರುವ ಮಹಾಕುಂಭ ಮೇಳ ನಿರೀಕ್ಷೆಮೀರಿದ ಯಶಸ್ಸು ಕಾಣುತ್ತಿದೆ. ಜನವರಿ 13ರಂದು ಆರಂಭವಾಗಿರುವ ಮತ್ತು ಪ್ರತೀ 144 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳದಲ್ಲಿ ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚಿನ ಜನರು ಈವರೆಗೆ ಭೇಟಿ ನೀಡಿದ್ದಾರೆ.೪೪ ದಿನಗಳ ಕಾಳ ನಡೆಯುವ ಮಹಾ ಕುಂಭಮೇಳ ೨೦೨೫ ಜನವರಿ ೧೩ ರಂದು ಮಕರ ಸಕ್ರಾಂತಿಯಿಂದ ಪ್ರಾರಂಭವಾಗಿ ಫೆಬ್ರವರಿ ೨೬ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ. ಇದುವರೆಗೆ ಸುಮಾರು 60 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.
ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹ ಅವರು ಬಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ ಅವರ ಜೊತೆ ಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಸ್ಟಾರ್ ನಟಿಯ ಜೊತೆ ಮಹಾ ಕುಂಭಮೇಳದಲ್ಲಿ ವಸಿಷ್ಠ ಸಿಂಹ ಅವರು ಪವಿತ್ರ ಸ್ನಾನ ಮಾಡಿದ್ದಾರೆ. ಮಹಾ ಕುಂಭಮೇಳದಲ್ಲಿ ಒಡೆಲಾ ೨ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದ್ದು, ಈ ವೇಳೆ ವಸಿಷ್ಠ ಸಿಂಹ ಅವರು ಕೂಡ ಇದ್ದರು. ಒಡೆಲಾ ೨ ಸಿನಿಮಾದಲ್ಲಿ ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ. ಚಿತ್ರತಂಡ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದು, ಪೋಟೋಗಳು ವೈರಲ್ ಆಗ್ತಿವೆ.
ಕೋಟಿ, ಕೋಟಿ ಭಕ್ತರನ್ನ ತನ್ನತ್ತ ಸೆಳೆಯುತ್ತಿರೋ ಪ್ರಯಾಗ್ರಾಜ್ ಮಹಾಕುಂಭಮೇಳಕ್ಕೆ ಈಗಾಗ್ಲೇ ಬಾಲಿವುಡ್ನ ಸೂಪರ್ಸ್ಟಾರ್ಗಳು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈಗ ಈ ಲಿಸ್ಟ್ಗೆ ಬಾಲಿವುಡ್ನ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಸೇರಿದ್ದಾರೆ. ಮಹಾ ಕುಂಭಮೇಳಕ್ಕೆ ಆಗಮಿಸಿದ ತಮನ್ನಾ ಹಾಗೂ ಕನ್ನಡದ ನಟ ವಸಿಷ್ಟ ಸಿಂಹ ಒಟ್ಟಾಗಿ ಪುಣ್ಯ ಸ್ನಾನ ಮಾಡಿದ್ದಾರೆ. ವಿಶ್ವ ವಿಖ್ಯಾತ ಈ ಮಹಾಕುಂಭಮೇಳ ಮುಕ್ತಾಯಕ್ಕೆ ಇನ್ನೇನು ಕೇವಲ 4ನೇ ದಿನಗಳು ಬಾಕಿ ಇದೆ.. ಮಹಾಶಿವರಾತ್ರಿಯಂದು 144 ವರ್ಷದ ಮಹಾಕುಂಭಮೇಳಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.