ಪಾವಗಡ : 30 ವರ್ಷಗಳ ಹೋರಾಟಕ್ಕೆ ಸಂದ ಜಯ | ಜಾಮೀಯ ಮಸೀದಿ ಕಮಿಟಿ ಸಂತಸ

ಪಾವಗಡ:

ಪಾವಗಡ ತಾಲೂಕಿನ ವೈ. ಎನ್. ಹೊಸಕೋಟೆ ಗ್ರಾಮದ ಮುಸ್ಲಿಂ ಸಮುದಾಯದಿಂದ ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಶುಕ್ರವಾರ ಈದ್ಗಾ ಮೈದಾನದಲ್ಲಿ ಸಂತಾಪ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಹಲವರು ಉಪಸ್ಥಿತರಿದ್ದರು.

ಜಾಮೀಯ ಮಸೀದಿ ವಿಚಾರವಾಗಿ ಮಾತನಾಡಿದ ಜಾಮಿಯಾ ಮಸೀದಿ ಮುತ್ತುವಲ್ಲಿ ಸಾಧಿಕ್ ಸಾಬ್ ನ್ಯಾಯಾಲಯದ ತೀರ್ಪು ನಮ್ಮ ಪರ ಬಂದಿರುವುದು ಸಂತಸ ತಂದಿದೆ. ಸುಮಾರು 400 ವರ್ಷದ ಇತಿಹಾಸವುಳ್ಳ ಜಾಮಿಯಾ ಮಸೀದಿ ಸೇರಿದ ಸುಮಾರು 17 ಎಕರೆ ಈದ್ಗಾ ಜಾಗದ ವಿಚಾರವಾಗಿ ಇಂದು ನಮ್ಮ ಪರವಾಗಿ ತೀರ್ಪು ಬಂದಿರುವುದು ಸಂತಸ ತಂದಿದೆ. ನಮ್ಮದೇ ಸಮುದಾಯದ ಚಾಂದ್ ಬಾಷ ಎಂಬಾತ 30 ವರ್ಷಗಳ ಹಿಂದೆ ನನ್ನ ಜಾಗ ಎಂಬುದಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಅದರ ವಿಚಾರವಾಗಿ ನ್ಯಾಯಾಲಯ ಜಾಮಿಯ ಮಸೀದಿ ಕಮಿಟಿಯ ಪರ ತೀರ್ಪು ನೀಡಿದೆ ಎಂದರು.

ಈ ವೇಳೆ ಮಸೀದಿ ಕಮಿಟಿಯ ಸದಸ್ಯ ಇಸ್ಮೈಲ್ ಮಾತನಾಡಿ ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಈ ಘೋರ ಘಟನೆ ಹೇಯ ಕೃತ್ಯವಾಗಿದೆ. ಯಾವುದೇ ಸಮುದಾಯದಲ್ಲಿಯೂ ಹೊಡೆದು ಸಾಯಿಸುವ ಪದ್ಧತಿ ಇಲ್ಲ. ಭಾರತೀಯ ಶಾಂತಿ ನೆಮ್ಮದಿ ಹಾಳು ಮಾಡುವ ವ್ಯವಸ್ಥೆ ಇತ್ತೀಚೆಗೆ ನಡೆಯುತ್ತಿರೋದು ಶೋಚನೀಯ ಸಂಗತಿ ಎಂದರು.

ಕಾರ್ಯದರ್ಶಿ ಮುಝಮಿಲ್  ಮಾತನಾಡಿ, 450 ವರ್ಷದ ಇತಿಹಾಸವುಳ್ಳ ಈದ್ಗಾ ಜಾಗದ ವಿಷಯವಾಗಿ ನ್ಯಾಯಲಯದ ತೀರ್ಪು ಜಾಮಿಯ ಮಸೀದಿ ಕಮಿಟಿ ಪರ ಆಗಿದೆ. ಈಗಿನ ಈ ಸ್ಥಳದಲ್ಲಿ ವ್ಯಾಪ್ತಿಯಲ್ಲಿ ಯೂಕಬರಸ್ಥಾನ ಸಹ ಇದ್ದು, ಈ ಸ್ಥಳದಲ್ಲಿ ಹಿಂದಿನಿಂದ ಮರಣ ಹೊಂದಿದ ವ್ಯಕ್ತಿಗಳ ಸುಮಾರು ಎರಡುವರೆ ಸಾವಿರ ಗೋರಿಗಳು ಇವೆ ಎಂದರು.

Author:

...
Sushmitha N

Copy Editor

prajashakthi tv

share
No Reviews