SIRA: ವೃದ್ಧನಿಗೆ ಕರೆಂಟ್ ಬಿಲ್ ಶಾಕ್ ಶೆಡ್ ಅಂಗಡಿಗೆ ಬಂತು ದುಬಾರಿ ಬಿಲ್

ಶಿರಾ: 

ರಾಜ್ಯದಲ್ಲಿ ಏಪ್ರಿಲ್1  ರಿಂದ ಕರೆಂಟ್‌ ಬಿಲ್‌ ಹೆಚ್ಚಳವಾಗಿದ್ದು ಜನರಿಗೆ ಸರ್ಕಾರ ವಿದ್ಯುತ್‌ ಶಾಕ್ ನೀಡಿದೆ. ಈ ಮಧ್ಯೆ‌ ಕರೆಂಟ್‌ ಬಿಲ್‌ ಬಂದಿರೋದನ್ನ ನೋಡಿ ವೃದ್ಧ ವ್ಯಾಪಾರಿ ಶಾಕ್‌ಗೆ ಒಳಗಾಗಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳಿನಿಂದ ಕರೆಂಟ್ಬಳ ಸದಿದ್ರು ನೂರಿಂದ ಇನ್ನೂರು ರೂಪಾಯಿ ಕರೆಂಟ್‌ ಬಿಲ್‌ ಬರುತ್ತೆ ಎಂಬ ಮಾತುಗಳು ಜನಸಾಮಾನ್ಯರಲ್ಲಿ ಕೇಳಿ ಬಂದಿತ್ತು. ಈಗ ಅದಕ್ಕೆ ಪೂರಕವಾಗುವಂತೆ ಶಿರಾದ ಬಡ ವ್ಯಾಪಾರಿಗೆ ಹೆಚ್ಚು ಕರೆಂಟ್‌ ಬಿಲ್‌ ಬಂದಿದೆ.

ಶಿರಾ ತಾಲೂಕಿನ ಬುಕ್ಕಾಪಟ್ಟಣದ ವೃದ್ಧ ವ್ಯಾಪಾರಿಯೊಬ್ಬ ಶೆಡ್ನಲ್ಲಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಲ್ಲಿ ಫ್ರಿಡ್ಜ್ಕೂಡ ಇಲ್ಲ, ಅಂಗಡಿಯಲ್ಲೀ ಕೇವಲ ಒಂದು ಲೈಟ್ನನ್ನು ಮಾತ್ರ ಬಳಸುತ್ತಾರೆ. ಆದರೆ  ಈ ವೃದ್ಧವ್ಯಾಪಾರಿ ಅಂಗಡಿಗೆ ಬರೊಬ್ಬರಿ 898 ರೂಪಾಯಿ ಕರೆಂಟ್‌ ಬಿಲ್‌ ಬಂದಿದ್ದು, ಕಂಗಾಲಾಗಿದ್ದಾರೆ. ಪ್ರತಿ ತಿಂಗಳು 10 ರಿಂದ 15 ರೂಪಾಯಿ ಕರೆಂಟ್‌ ಬಿಲ್‌ ಬರ್ತಾ ಇತ್ತಂತೆ. ಆದರೆ ಕಳೆದ ತಿಂಗಳು 200ರಷ್ಟು ಕರೆಂಟ್‌ ಬಿಲ್‌ ಬಂದಿತ್ತಂತೆ. ಆದರೆ  ಈ ತಿಂಗಳು 898 ರೂಪಾಯಿ ಬಂದಿದ್ದು, ವೃದ್ಧ ವ್ಯಾಪಾರಿ ಕಂಗಾಲಾಗಿದ್ದಾರೆ.  ಪ್ರತಿ ತಿಂಗಳು 10 ರಿಂದ 15 ರೂಪಾಯಿ ಕರೆಂಟ್‌ ಬಿಲ್‌ ಬರ್ತಾ ಇತ್ತಂತೆ. ಆದರೆ ಕಳೆದ ತಿಂಗಳು 200ರಷ್ಟು ಕರೆಂಟ್ ಬಿಲ್‌ ಬರ್ತಾ ಇತ್ತಂತೆ.  ಈ ತಿಂಗಳು 898 ರೂಪಾಯಿ ಬಂದಿದ್ದು, ವೃದ್ಧ ವ್ಯಾಪಾರಿ ಕಂಗಾಲಾಗಿದ್ದಾರೆ. 

 ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಉಚಿತ ಕರೆಂಟ್‌ ಭಾಗ್ಯ ಕೊಟ್ಟ ಕಾಂಗ್ರೆಸ್‌ ಸರ್ಕಾರ, ಸದ್ದಿಲ್ಲದೇ ಬಡವರ ಮೇಲೆ  ಕರೆಂಟ್‌ ಬರೆ ಎಳೆಯುತ್ತಿದೆ. ಹೆಚ್ಚು ವಿದ್ಯುತ್‌ ಬಳಕೆ ಮಾಡದವರ ಮೇಲೂ ದುಪ್ಪಟ್ಟು ಕರೆಂಟ್ ದರಹಾಕ್ತಿದ್ದು ಬಡವರು ಕಂಗಾಲಾಗ್ತಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.  
 

Author:

...
Shabeer Pasha

Managing Director

prajashakthi tv

share
No Reviews