ಶಿರಾ : ಶಿರಾ ತಾಲೂಕಿನ ಯಲಿಯೂರು ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ ಬಹುಗ್ರಾಮ ಕುಡಿಯುವ ಯೋಜನೆಯು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿಯುತ್ತಿತ್ತು. ಈ ಕುರಿತು ಪ್ರಜಾಶಕ್ತಿ ಟಿವಿಯ ವರದಿ ಬಿತ್ತರಿಸಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು ಕಟ್ಟಡದ ಸುತ್ತಮುತ್ತ ಬೆಳೆದಿದ್ದ ಜಾಲಿ ಮರ, ಬೇಲಿಯನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಪ್ಯಾಕ್ಟ್ .
ಹೌದು, ತಾಲೂಕಿನ ಯಲಿಯೂರಿನಲ್ಲಿ 35 ಕೋಟಿ ವೆಚ್ಚದಲ್ಲಿ 2016-17 ಸಾಲಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಟ್ಟಡ ಮತ್ತು ನೀರು ಸಂಗ್ರಹ ಟ್ಯಾಂಕ್ಗಳನ್ನು ಕಟ್ಟಿಸಲಾಗಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಅದನ್ನು ಉದ್ಘಾಟನೆ ಕೂಡ ಮಾಡಿದ್ರು. ಆದ್ರೆ ಕಾಮಗಾರಿ ಪೂರ್ಣಗೊಂಡು 22 ಗ್ರಾಮಗಳಿಗೆ ಕುಡಿಯುವ ನೀರನ್ನು ಕಲ್ಪಿಸುವ ಯೋಜನೆ ತೆರೆಯದೆ ಗಿಡಗೆಂಟೆಗಳು ಬೆಳೆದು ಹಾಳುಕೊಂಪೆಯಾಗಿತ್ತು. ವೆಸ್ಟ್ ತುಂಬುವ ಸ್ಥಳವಾಗಿ ಮಾರ್ಪಟ್ಟಿತ್ತು. ಈ ಸುದ್ದಿಯನ್ನು ಬಿತ್ತರಿಸಿದ ಬೆನ್ನಲ್ಲೆ ಅಧಿಕಾರಿಗಳು ಬಂದು ನೀರಿನ ಟ್ಯಾಂಕ್ ಸುತ್ತಮುತ್ತ ಬೆಳೆದಿದ್ದ ಗಿಡಗೆಂಟೆಗಳನ್ನು ಕ್ಲೀನ್ ಮಾಡಿದ್ದಾರೆ. ಆದ್ರೆ ಅದರೊಳಗೆ ಇರುವ ಯಂತ್ರಗಳು ಇನ್ನು ತುಕ್ಕು ಹಿಡಿದು ಕೂತಿವೆ. ಇಂತಹ ಕಾಟಾಚಾರದ ಕೆಲಸವನ್ನು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.