ಹುಬ್ಬಳ್ಳಿ: ಅಮೆರಿಕಾದಲ್ಲಿ ಓದಬೇಕು, ಬ್ರಾಂಡೆಡ್ ಬಟ್ಟೆ ಖರೀದಿಸಬೇಕು, ಪ್ಯಾಶನ್ ಫಾಲೋ ಮಾಡಬೇಕು ಎಂಬ ಅತಿರೇಕದ ಆಸೆಗಳಿಗಾಗಿ ಯುವಕನೋರ್ವ ತನ್ನದೇ ಸಂಬಂಧಿಕರ ಮನೆಗೆ ಕನ್ನ ಹಾಕಿದ ಘಟನೆ ಹುಬ್ಬಳ್ಳಿಯ ಇಸ್ಲಾಂಪುರ ಓಣಿಯಲ್ಲಿ ನಡೆದಿದೆ.
ಪ್ರತಿಷ್ಠಿತ ಹೂವಿನ ವ್ಯಾಪಾರಿಯಾಗಿರುವ ಗದಗಕರ ಎಂಬವರ ಮನೆಯಲ್ಲಿ 194 ಗ್ರಾಂ ಚಿನ್ನ ಕಳ್ಳತನವಾಗಿತ್ತು, ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೃತ್ಯದಲ್ಲಿ ಅವರ ತಮ್ಮನ ಮಗ ಮುಸ್ಸಬ್ಬಿರ ಗದಕರ ಎಂಬಾತನೇ ಕಳ್ಳತನ ಎಸಗಿರುವ ಬಗ್ಗೆ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಈತನ ಅಮೆರಿಕಾ ಆಸೆಗೋಸ್ಕರ ಹಾಗೂ ಆಧುನಿಕ ಜೀವನ ಶೈಲಿಯ ಆಸೆಗೋಸ್ಕರ ಈ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಹುಬ್ಬಳ್ಳಿಯ ಕಸಬಾ ಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರಾಘವೇಂದ್ರ ಹಳ್ಳೂರ ಮತ್ತು ಪಿಎಸ್ಐ ಚಂದ್ರಶೇಖರ ಮದರಖಂಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯನ್ನು ಶೀಘ್ರವಾಗಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.