ಶಿರಾ:
ಪ್ರಜಾಶಕ್ತಿ ಪ್ರತಿ ಹಳ್ಳಿ ಹಳ್ಳಿಗಳ ವಸ್ತು ಸ್ಥಿತಿಯನ್ನು ಅಧಿಕಾರಿಗಳ ಮುಂದಿಡುವ ಕೆಲಸವನ್ನು ಮಾಡ್ತಾ ಇದೆ. ಆದರೆ ನಿಖರವಾಗಿ ಸುದ್ದಿ ಮಾಡುವ ಪ್ರಜಾಶಕ್ತಿ ಹಾದಿಯನ್ನೇ ದಾರಿ ತಪ್ಪಿಸುವ ಕೆಲಸವನ್ನು ಗ್ರಾಮ ಪಂಚಾಯ್ತಿ ಪಿಡಿಒ ಮಾಡಿದ್ದಾರೆ. ಆಶ್ಚರ್ಯ ಆದರೂ ಇದು ನಿಜ. ಹೌದು ಶಿರಾ ತಾಲೂಕಿನ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಮರಿಚೀಕೆಯಾಗಿದ್ದು, ಈ ಬಗ್ಗೆ ವರದಿ ಮಾಡಲು ನಮ್ಮ ವರದಿಗಾರರು ಹೊಸೂರು ಗ್ರಾಮ ಪಂಚಾಯ್ತುಗೆ ತೆರಳಿದ್ದರು. ಗ್ರಾಮ ಪಂಚಾಯ್ತಿ ಅವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಚರಂಡಿಗಳಲ್ಲಿ ಕಸಕಡ್ಡಿ ತುಂಬಿ ನಿಂತಿವೆ. ಹೀಗಾಗಿ ಚರಂಡಿಗಳಲ್ಲಿ ನೀರು ನಿಂತುಕೊಳ್ಳುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗ್ತಿವೆ. ಹೀಗಾಗಿ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದರು.
ಈ ವೇಳೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಲ್ಲಿಯ ಪರಿಸ್ಥಿತಿ ಅವಲೋಕನ ಮಾಡಿ ನಿಮ್ಮ ಪ್ರಜಾ ಶಕ್ತಿ ಟಿವಿ ನಿನ್ನೆ ಸುದ್ದಿ ಬಿತ್ತರಿಸಿತು. ಸುದ್ದಿ ಪ್ರಸಾರದ ಬೆನ್ನಲ್ಲೇ ಇಲ್ಲಿಯ ಪಿಡಿಒ ತನ್ನ ತಪ್ಪನ್ನು ಮರೆಮಾಚಲು ಯಾವುದೋ ಗ್ರಾಮದ ಹಳೆಯ ಪೋಟೋ ವನ್ನು ಕಳುಹಿಸಿ ಚರಂಡಿಗಳಲ್ಲಿದ್ದ ಕಸವನ್ನು ತೆಗೆದಿರುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಪಿಡಿಒ ಅಧಿಕಾರಿ ಕಳುಹಿಸಿರುವ ಫೋಟೋಗಳು ಬೇರೆ ಗ್ರಾಮದ ಸ್ವಚ್ಛತಾ ಕಾರ್ಯದ ಫೋಟೋಗಳು ಆಗಿವೆ. ಅಲ್ಲದೇ ಇದೇ ಮಾರ್ಚ್ 1ರಂದು ಸ್ವಚ್ಛತಾ ಕಾರ್ಯ ಕೈಗೊಂಡಿರುವ ಫೋಟೋಗಳನ್ನು ನಮ್ಮ ವರದಿಗಾರರಿಗೆ ಕಳುಹಿಸಿ ತಪ್ಪನ್ನು ಮರೆಮಾಚುವ ಕೆಲಸವನ್ನು ಪಿಡಿಒ ಅಧಿಕಾರಿ ಮಾಡಿದ್ದಾರೆ. ಅಧಿಕಾರಿಗಳು ತಮ್ಮ ತಪ್ಪನ್ನು ಸರಿಮಾಡಿಕೊಳ್ಳುವುದರ ಬದಲು ಪತ್ರಕರ್ತರನ್ನೇ ದಾರಿ ತಪ್ಪಿಸುವ ಕೆಲಸವನ್ನು ಮಾಡಿದ್ದಾರೆ. ಇವರ ಚಾಲಾಕಿತನಕ್ಕೆ ಪ್ರಜಾಶಕ್ತಿ ಟಿವಿ ಎಂದಿಗೂ ಸೊಪ್ಪು ಹಾಕೋದಿಲ್ಲ.