ನವದೆಹಲಿ : ಛತ್ತೀಸ್‌ ಗಢದಲ್ಲಿ ಮಾವೋವಾದಿಗಳ ಹತ್ಯೆ | ನಕ್ಸಲಿಸಂ ನಿರ್ಮೂಲನೆಯತ್ತ ಭಾರತ ಹೆಜ್ಜೆ

ನವದೆಹಲಿ : ಭಾರತದಲ್ಲಿ ನಕ್ಸಲಿಸಂ ವಿರುದ್ಧದ ಮೂರು ದಶಕಗಳ ಹೋರಾಟದಲ್ಲಿ ತಿರುವು ತರುವಂತ ಮಹತ್ವದ ಸಾಧನೆ ಇಂದು ದಾಖಲಾಗಿದೆ. ಛತ್ತೀಸ್‌ಗಢದ ನಾರಾಯಣ್‌ಪುರದ ಅಬುಜ್ಮದ್‌ ಪ್ರದೇಶದಲ್ಲಿ  ನಡೆದ "ಆಪರೇಷನ್‌ ಬ್ಲಾಕ್ ಫಾರೆಸ್ಟ್" ಎಂಬ ಹೆಸರಿನ ಭದ್ರತಾ ಕಾರ್ಯಾಚರಣೆಯಲ್ಲಿ, ಭಾರತೀಯ ಭದ್ರತಾ ಪಡೆಗಳು 27 ಮಾವೋವಾದಿಗಳನ್ನು ಸ್ಥಳದಲ್ಲೇ ಹತ್ಯೆಮಾಡಿದ್ದಾರೆ. ಮೃತರಲ್ಲಿ ಮಾವೋ ಚಳವಳಿಯ ಸಿಪಿಐ, ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ನಂಬಾಲ ಕೇಶವ್ ರಾವ್ ಅಲಿಯಾಸ್ ಬಸವರಾಜು ಕೂಡ ಹತ್ಯೆಯಾಗಿದ್ದಾನೆ.

ಕಳೆದ 30 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ಸಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಯಕನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭದ್ರತಾ ಪಡೆಗಳನ್ನು ಭಾರೀ ಪ್ರಶಂಸಿಸಿದ್ದು, ಈ ಬಗ್ಗೆ ಮೋದಿ ಹಾಗೂ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

"ನಮ್ಮ ಶೂರ ವೀರಭದ್ರತಾ ಪಡೆಗಳು ಸಾಧಿಸಿರುವ ಈ ಇತಿಹಾಸಾತ್ಮಕ ಯಶಸ್ಸಿಗೆ ಹೃದಯಪೂರ್ವಕ ಅಭಿನಂದನೆಗಳು. ನಕ್ಸಲಿಸಂ ನಿರ್ಮೂಲನೆಗಾಗಿ ನಾವು ಬದ್ಧರಾಗಿದ್ದೇವೆ. ಶಾಂತಿ ಮತ್ತು ಪ್ರಗತಿಗೆ ಇದೊಂದು ದೊಡ್ಡ ಹೆಜ್ಜೆ," ಎಂದು ತಿಳಿಸಿದ್ದಾರೆ. ಈ ಯಶಸ್ಸು, ದೇಶದ ಒಳಾಂಗಣ ಭದ್ರತೆ, ಅಭಿವೃದ್ಧಿ ಯೋಜನೆಗಳು ಹಾಗೂ ಹಿಂದುಳಿದ ಪ್ರದೇಶಗಳ ಪುನರ್ ನಿರ್ಮಾಣದ ಪ್ರಕ್ರಿಯೆಗೆ ಮಹತ್ವದ ನಿರೀಕ್ಷೆಯಿದೆ. ದೇಶದಲ್ಲಿ ಶಾಂತಿ ಹಾಗೂ ಅಭಿವೃದ್ದಿಯ ಜೀವನವನ್ನ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಈ ಯಶಸ್ಸಿಗಾಗಿ ನಮ್ಮ ಪಡೆಗಳ ಮೇಲೆ ಹೆಮ್ಮೆ ಇದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ದೇಶವನ್ನು 2026ರ ಮಾರ್ಚ್‌ 31 ರೊಳಗೆ ನಕ್ಸಲ್‌ ಮುಕ್ತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

 

Author:

...
Sushmitha N

Copy Editor

prajashakthi tv

share
No Reviews