ಚಿಕ್ಕಬಳ್ಳಾಪುರ:
ಒಂದೇ ಗ್ರಾಮದ ಬೇರೆ ಬೇರೆ ಧರ್ಮದ ಯುವಕ ಯುವತಿ ಪರಸ್ಪರ ಪ್ರೀತಿಸಿ ಪ್ರೇಮವಿವಾಹವಾಗಿ ಬಳಿಕ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದ ನಿವಾಸಿ ನಾಗಾರ್ಜುನ್ ಮತ್ತು ಫಸಿಹಾ ಎಂಬುವವರು 2 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಈ ಜೋಡಿ ಮದುವೆಯಾಗಿದ್ದು, ರಕ್ಷಣೆ ನೀಡುವಂತೆ ಪೋಲೀಸರಲ್ಲಿ ಮನವಿ ಮಾಡಿಕೊಂಡಿದೆ.
ಮದುವೆಗೆ ಯುವತಿ ಪೋಷಕರ ವಿರೋಧವಿತ್ತು. ಹೀಗಾಗಿ ಮನೆಯಿಂದ ಹೊರ ಹೋಗಿ ಈ ಜೋಡಿ ಮದುವೆಯಾಗಿದ್ದಾರೆ. ಮನೆಯವರ ವಿರೋಧದ ಹಿನ್ನಲೆಯಲ್ಲಿ ಭಯಭೀತರಾಗಿರುವ ನವ ವಧುವರರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪೋಲೀಸರು ಯುವಕ ಹಾಗೂ ಯುವತಿ ಕಡೆಯವರ ತಂದೆ-ತಾಯಿ ಬಂಧುಳನ್ನು ಕರೆಸಿ ಯುವತಿಯ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಫಸಿಹಾ ನಾನು ಇಷ್ಟಪಟ್ಟು ನಾಗಾರ್ಜುನನನ್ನು ಮದುವೆಯಾಗಿದ್ದೇನೆ. ಆತನ ಜೊತೆಯಲ್ಲೇ ಜೀವನ ಮಾಡುತ್ತೇನೆ ಎಂದು ತಿಳಿಸಿದ್ದಾಳೆ. ಯುವತಿ ಹೇಳಿಕೆ ಬಳಿಕ ನವ ದಂಪತಿಗೆ ರಕ್ಷಣೆ ನೀಡುವ ಭರವಸೆ ಕೊಟ್ಟು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.