ಮಧುಗಿರಿ:
ಈ ಬಾರಿ ಮಧುಗಿರಿ ತಾಲೂಕಿಗೆ ಸುಮಾರು 15 ಸಾವಿರ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ 73 ಮನೆಗಳ ಹಕ್ಕುಪತ್ರ ವಿತರಣೆ ಮಾಡಿದ್ದು ರಾಜ್ಯದಲ್ಲೇ ಮೊದಲು ಎಂದು ಸಚಿವ ರಾಜಣ್ಣ ಸಂತಸ ವ್ಯಕ್ತಪಡಿಸಿದರು. ಮಧುಗಿರಿ ತಾಲೂಕಿನ ಕೋಟಗಾರಹಳ್ಳಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಭಾಗಿಯಾಗಿದ್ದ ಸಚಿವ ರಾಜ̧ಣ್ಣ ವಿಶೇಷ ಘಟಕ ಯೋಜನೆಯಡಿ ಮಂಜೂರಾಗಿದ್ದ 1500 ನಿವೇಶನಗಳ ಹಕ್ಕುಪತ್ರ ಹಾಗೂ ಮಾಸಾಶನ ವಿತರಿಸಿದರು. ಜೊತೆಗೆ 20 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಹಾಗೂ ರೈತರಿಗೆ ಬಿತ್ತನೆ ಬೀಜಗಳ ಕಿಟ್ಗಳನ್ನು ವಿತರಣೆ ಮಾಡಿದರು. ಈ ವೇಳೆ ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ತಹಶೀಲ್ದಾರ್ ಶಿರಿನ್ ತಾಜ್, ಆರ್ಐ ಜಯಪ್ರಕಾಶ್, ಗ್ರಾ.ಪಂ. ಅಧ್ಯಕ್ಷೆ ಕಾವ್ಯಶ್ರೀ ಮುಖಂಡರಾದ ದೀಪು, ಗಂಗಾಧರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು ಮಧುಗಿರಿ ತಾಲೂಕಿನ ನಿಗದಿತ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ತುಂಬಿಸುವ 391 ಕೋಟಿ ವೆಚ್ಚದ ಕಾಮಗಾರಿ ಚಾಲನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವರು. ಈಗಾಗಲೇ ಕೊರಟಗೆರೆಯಲ್ಲಿ ಎತ್ತಿನಹೊಳೆ ಕಾಮಗಾರಿಗೆ ಚಾಲನೆ ನೀಡಿದ್ದು, ಆದಷ್ಟು ಬೇಗ ಮಧುಗಿರಿಯಲ್ಲೂ ಎತ್ತಿನಹೊಳೆ ಕಾಮಗಾರಿಗೆ ಅದ್ದೂರಿಯಾಗಿ ಚಾಲನೆ ಕೊಡಲಾಗುವುದು ಎಂದು ಸಚಿವ ರಾಜಣ್ಣ ಹೇಳಿದರು.
ಜಿ.ಪಂ.ಸಿಇಓ ಪ್ರಭು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯ್ತಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಗಳು ಸಧೃಡವಾಗಿ ಕೆಲಸ ಮಾಡಿದರೆ ಗ್ರಾಮೀಣ ಭಾಗ ಸಾಕಷ್ಟು ಅಭಿವೃದ್ಧಿ ಹೊಂದಲಿದೆ. ನರೇಗಾ ಅನುಷ್ಠಾನದಲ್ಲಿ ಮಧುಗಿರಿ ಕ್ಷೇತ್ರ 14 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ದ್ವಿತೀಯ ಹಾಗೂ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ ಇದಕ್ಕೆ ಸಚಿವರಾದ ಡಾ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ನವರ ಕಾರಣ ಎಂದರು.