ಹೆಬ್ಬೂರು:
ಪಾಳು ಬೀಳ್ತಿರೋ ಬೈಕ್.. ಕಾರು… ಟ್ರ್ಯಾಕ್ಟರ್‌ಗಳು,, ಇದೆನೂ ಗ್ಯಾರೇಜೋ ಅಥವಾ ಗೋಡಾನ್ ಏನೋ ಅಂತಾ ಕನ್ಫೂಸ್ ಆಗಬೇಡಿ… ಇದು ನಮ್ಮ ಆರಕ್ಷರ ಠಾಣೆಯಲ್ಲಿ ಮೂಲೆಗುಂಪಾಗಿ ಬಿದ್ದಿರೋ ಗಾಡಿಗಳು… ಹೌದು ನಾನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗಾಡಿಗಳನ್ನು ಸೀಜ್ ಮಾಡಿದ್ದು.. ಇತ್ತ ಗಾಡಿಗಳನ್ನು ಹರಾಜು ಮಾಡ್ತಾ ಇಲ್ಲ ಇತ್ತ ವಾರಸುದಾರರನ್ನು ಕರೆಸಿ ದಂಡ ಕಟ್ಟಿಸಿಕೊಂಡು ವಾಪಸ್ ಕೂಡ ಕೊಡ್ತಾ ಇಲ್ಲ. ಹೀಗಾಗಿ ಪೊಲೀಸ್ ಠಾಣೆಯ ಮೂಲೆಯಲ್ಲಿ ಸತ್ತ ಜೀವಗಳಂತೆ ಗಾಡಿಗಳು ಬಿದ್ದಿವೆ.
ಈ ಎಲ್ಲಾ ಗಾಡಿಗಳು ನಿರ್ಜೀವದಂತೆ ಬಿದ್ದಿರೋದು ತುಮಕೂರು ಜಿಲ್ಲೆ ಹೆಬ್ಬೂರು ಪೊಲೀಸ್ ಠಾಣೆಯ ಆವರಣದಲ್ಲಿ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುವ ಪ್ರದೇಶಗಳಲ್ಲಿ ನಾನಾ ಪ್ರಕರಣಗಳಲ್ಲಿ ಬೈಕ್, ಕಾರು ಹಾಗೂ ಟ್ರ್ಯಾಕ್ಟರ್‌ಗಳನ್ನು ಸೀಜ್ ಮಾಡಲಾಗಿದೆ. ಆದ್ರೆ ಸೀಜ್ ಆದ ಗಾಡಿಗಳು ಸುಮಾರು ವರ್ಷಗಳಿಂದ ಅಲ್ಲಿಯೇ ಬಿದ್ದಿದ್ದು ಗೆದ್ದಲು ಹಿಡಿಯುತ್ತಿವೆ. ವಾಹನಗಳನ್ನು ಸೀಜ್ ಮಾಡಿದ ವೇಳೆ ದಂಡ ಕಟ್ಟಿಸಿಕೊಂಡು ವಾಹನಗಳನ್ನು ರಿಲೀಸ್ ಮಾಡಬೇಕು. ಇಲ್ಲವಾದ್ರೆ ಇಂದಿಷ್ಟು ಸಮಯದ ಬಳಿಕ ಕೋರ್ಟ್‌ನಿಂದ ಹರಾಜು ಮಾಡಲು ಆದೇಶ ತಂದು ಸೀಜ್ ಆದ ಗಾಡಿಗಳನ್ನು ಮಾರಾಟ ಮಾಡಲು ಅವಕಾಶ ಇರುತ್ತೆ.
ಆದ್ರೆ ಹೆಬ್ಬೂರು ಪೊಲೀಸ್ ಠಾಣೆ ಪೊಲೀಸರು ಹರಾಜು ಮಾಡದೇ ಇತ್ತ ವಾರಸುದಾರರಿಗೆ ಹಿಂತಿರುಗಿಸುವ ಕೆಲಸ ಮಾಡದೇ ಬೇಜಬ್ದಾರಿ ಮೆರೆಯುತ್ತಿರೋದು ಮೇಲ್ನೋಟಕ್ಕೆ ಕಂಡು ಬರ್ತಾ ಇದೆ. ಲಕ್ಷಾಂತರ ರೂಪಾಯಿ ಮೌಲ್ಯದ ಗಾಡಿಗಳು ಮೂಲೆಗುಂಪಾಗಿದ್ದು ಪೊಲೀಸರ ಕಾರ್ಯವೈಖರಿಗೆ ಕೈಕನ್ನಡಿಯಾಗಿದೆ. ಇನ್ನಾದ್ರು ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್, ಎಸ್‌ಪಿ ಗಮನ ಹರಿಸಿ ಸೀಜ್ ಆಗೊರೋ ಗಾಡಿಗಳನ್ನು ನಿಯಮಬದ್ಧವಾಗಿ ಬಗೆಹರಿಸಿ ಮೂಲೆಗುಂಪಾಗಿ ಬಿದ್ದಿರೋ ಗಾಡಿಗಳಿಗೆ ಮುಕ್ತಿ ಕೊಡಿಸಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಡ್ತಾಇದ್ದಾರೆ.