MOVIE : ಥಗ್ ಲೈಫ್ ಸಿನಿಮಾ ಕಲೆಕ್ಷನ್ ಡಲ್

THUG LIFE COLLECTION : ಥಗ್ ಲೈಫ್’ ಸಿನಿಮಾ ರಿಲೀಸ್ ಆಗಿ ಐದು ದಿನಗಳು ಕಳೆದಿವೆ. ಆದರೆ, ಕಲೆಕ್ಷನ್ ಮಾತ್ರ ಇನ್ನೂ ಕುಟುಂತ್ತಲೇ ಸಾಗುತ್ತಿದೆ. ಈ ಚಿತ್ರ ಏಳ್ಗೆ ಕಾಣುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ಚಿತ್ರ ಐದು ದಿನಕ್ಕೆ 50 ಕೋಟಿ ರೂಪಾಯಿ ಕ್ಲಬ್ ಸೇರಲು ಒದ್ದಾಡುತ್ತಿದೆ. ಹೀಗೆ ಮುಂದುವರಿದರೆ ನಿರ್ಮಾಪಕ ಕಮಲ್ ಹಾಸನ್‌ಗೆ ದೊಡ್ಡ ಮಟ್ಟದಲ್ಲಿ ನಷ್ಟ ಆಗೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬಂದಿವೆ. ‘ಥಗ್ ಲೈಫ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.

ಆದರೆ, ಚಿತ್ರ ಉತ್ತಮ ವಿಮರ್ಶೆ ಪಡೆದಿಲ್ಲ. ಈ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದೇ ಇರುವುದು ಕೂಡ ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ಸಾಮಾನ್ಯವಾಗಿ ಚಿತ್ರಗಳು ವೀಕೆಂಡ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತವೆ. ಆದರೆ, ವಾರದ ದಿನಗಳಲ್ಲಿ ಸಿನಿಮಾದ ಗಳಿಕೆ ಕುಂಟುತ್ತದೆ. ಆದರೆ, ‘ಥಗ್ ಲೈಫ್’ ವೀಕೆಂಡ್ ಹಾಗೂ ವಾರದ ದಿನ ಎರಡರಲ್ಲೂ ಡಲ್ ಹೊಡೆದಿದೆ. ಸದ್ಯ ‘ಥಗ್ ಲೈಫ್’ ಚಿತ್ರದ ಒಟ್ಟು ಗಳಿಕೆ 40 ಕೋಟಿ ರೂಪಾಯಿ ಆಗಿದೆ. ‘ಥಗ್ ಲೈಫ್’ ಚಿತ್ರದ ಬಜೆಟ್ 300 ಕೋಟಿ ರೂಪಾಯಿ ಎಂದು ತಂಡದವರು ಇತ್ತೀಚೆಗೆ ಮಾಹಿತಿ ನೀಡಿದ್ದರು.

Author:

...
Keerthana J

Copy Editor

prajashakthi tv

share
No Reviews