ಸಿನಿಮಾ : ನಾನು ಮತ್ತು ಗುಂಡ-2 ಟ್ರೈಲರ್ ರಿಲೀಸ್ ಟ್ರೈಲರ್ ರಿಲೀಸ್

ಸಿನಿಮಾ : ನಾನು ಮತ್ತು ಗುಂಡ-2 ಚಿತ್ರದ ಮೊದಲ  ಟ್ರೈಲರ್ ಇದೀಗ ಅಧಿಕೃತವಾಗಿ ರಿಲೀಸ್ ಆಗಿದೆ. ನಿರ್ದೇಶಕ ರಘು ಹಾಸನ್ ಅವರು ತಮ್ಮ ಈ ದೊಡ್ಡ ಕನಸಿನ ಹೊಸ ಪ್ರಯತ್ನದ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಗುಂಡನ ಕಥೆಯಲ್ಲಿ ಹೊಸದಾದ ಎಮೋಷನ್ಗಳ ತೆರೆತಿದ್ದಾರೆ, ಟ್ರೈಲರ್ ನೋಡಿದರೆ ನಿಜಕ್ಕೂ ಪ್ರಾಮಿಸಿಂಗ್ ಅನಿಸುತ್ತದೆ.

ಹಿಂದಿನ ಭಾಗದ ಹ್ಯೂಮರ್ ಮತ್ತು ಎಮೋಷನ್ ಮಿಶ್ರಿತ ಕಥೆಯನ್ನು ಮೀರಿಸಿ, ಈ ಬಾರಿ ಟ್ರೈಲರ್ ನ 3 ನಿಮಿಷ 46 ಸೆಕೆಂಡುಗಳಲ್ಲಿ ಕಥೆಯ ಆಳವನ್ನೇ ತೋರಿಸಿದ್ದಾರೆ. ಹಿಂದಿನ ಚಿತ್ರದಲ್ಲಿ ನಟ ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಇದ್ದರು. ಈ ಬಾರಿ ಕೂಡ ಗುಂಡ ಪಾತ್ರವೇ ಕಥೆಯ ಕೇಂದ್ರಬಿಂದುವಾಗಿದ್ದು, ಇದರ ಕಥನದಲ್ಲಿ ರಾಕೇಶ್ ಅಡಿಗ ಅವರ ಸಹಭಾಗಿತ್ವವೂ ವಿಶೇಷತೆ ಆಗಿದೆ.

ಪ್ಯಾಂ ಇಂಡಿಯಾ ರಿಲೀಸ್ ಗೊಳ್ಳುತ್ತಿರುವ ನಾನು ಮತ್ತು ಗುಂಡ-2, ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕೂಡಾ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಭಾಷೆಗಳ ಟ್ರೈಲರ್ ಗಳನ್ನೂ ಒಂದೇ ದಿನದಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ಸಂಗೀತ ನೀಡಿರೋದು ಆರ್.ಪಿ. ಪಟ್ನಾಯಕ್, ಹಾಗಾಗಿ ಶ್ರವ್ಯತೆಯತ್ತೂ ವಿಶೇಷ ಗಮನ ಹರಿಸಲಾಗಿದೆ. ನಿರ್ಮಾಣದ ಹೊಣೆಯನ್ನು ಕೂಡಾ ನಿರ್ದೇಶಕರೇ ಹೊತ್ತಿದ್ದಾರೆ ಎಂಬುದು ಮತ್ತೊಂದು ಆಸಕ್ತಿದಾಯಕ ಅಂಶ.

ನಾನು ಮತ್ತು ಗುಂಡ-2 ಚಿತ್ರ ಅಭಿಮಾನಿಗಳಿಗೆ ಭಾವುಕತೆಯ ಜೊತೆಗೆ ಹೊಸ ನಿರೀಕ್ಷೆಗಳನ್ನೂಂಟು ಮಾಡಿದೆ. ಇದೀಗ ಟ್ರೈಲರ್ ನೋಡಿ ಎಲ್ಲರೂ ಸಿನಿಮಾ ಬಿಡುಗಡೆಗೆ ಕಾದು ಕುಳಿತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews