ನವದೆಹಲಿ : ದೇಶದಲ್ಲಿ ವಿಮಾನಯಾನ ಸುರಕ್ಷತೆಗೆ ಹೆಚ್ಚು ಮಹತ್ವ ನೀಡುತ್ತಿರುವ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ DGCA ಎಲ್ಲಾ ಏರ್‌ಲೈನ್ಸ್‌ಗಳಿಗೆ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಕಿಟಕಿಗಳನ್ನು ಮುಚ್ಚುವಂತೆ ಹೊಸ ಸೂಚನೆ ನೀಡಿ ಆದೇಶ ನೀಡಿದೆ.
ಆಪರೇಷನ್ ಸಿಂಧೂರ ಕಾರ್ಯಚಾರಣೆಯ ಬಳಿಕ ಭದ್ರತಾ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ. ದೇಶದ ವಿವಿಧ ಏರ್‌ಪೋರ್ಟ್‌ಗಳಲ್ಲಿ ಗೂಢಚಾರರು ಹಾಗೂ ಅನುಮಾನಸ್ಪದ ಚಟುವಟಿಕೆಗಳ ಕಂಡುಬಂದ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
DGCA ಆದೇಶದ ಪ್ರಮುಖ ಅಂಶಗಳು ಹೀಗಿವೆ :
ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಕಿಟಕಿ ತೆರೆದಿಟ್ಟಿರುವುದು ನಿರ್ಬಂಧಿತ
ವಿಮಾನದಲ್ಲಿ ವಿಡಿಯೋ ಅಥವಾ ಫೋಟೋ ತೆಗೆದ ಪ್ರಯಾಣಿಕರ ವಿರುದ್ಧ ಕಾನೂನು ಕ್ರಮ
ಸುರಕ್ಷತಾ ಹಿನ್ನಲೆಯಲ್ಲಿ ವಿಮಾನದ ಒಳಗಿನ ಕೆಲವು ಭಾಗಗಳನ್ನು ದಾಖಲಿಸುವುದೂ ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆ
ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಇತ್ತೀಚೆಗೆ ನಡೆದ ವಿಶೇಷ ಭದ್ರತಾ ಪರಿಶೀಲನೆಯ ನಂತರ, ವಿವಿಧ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿದ ಶಂಕಿತ ಚಟುವಟಿಕೆಗಳು, ವಿದೇಶಿ ಸಂಶಯಾಸ್ಪದ ದೃಶ್ಯಗಳು ವರದಿಯಾಗಿದ್ದು, ಈ ಹಿನ್ನಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
DGCA ಪ್ರಕಟಣೆಯಲ್ಲಿ, ಎಲ್ಲಾ ಪ್ರಯಾಣಿಕರು ವಿಮಾನಸುರಕ್ಷತೆಗೆ ಸಂಬಂಧಿಸಿದ ನಿಯಮ ಪಾಲಿಸಬೇಕು ಮತ್ತು ಯಾವುದೇ ನಿಷೇಧಿತ ಚಟುವಟಿಕೆಯಲ್ಲಿ ತೊಡಗಿದರೆ, ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.