ಮಹಾರಾಷ್ಟ್ರ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನೀರಿಗಾಗಿ ಮಹಿಳೆಯರ ಪರದಾಟ

ಮಹಿಳೆ ನೀರಿಗಾಗಿ ಬಾವಿಯೊಳಗೆ ಇಳಿದಿರುವುದು.
ಮಹಿಳೆ ನೀರಿಗಾಗಿ ಬಾವಿಯೊಳಗೆ ಇಳಿದಿರುವುದು.
ದೇಶ

ಮಹಾರಾಷ್ಟ್ರ :

ಬೇಸಿಗೆ ಆರಂಭವಾಗಿದ್ದು,  ಮತ್ತೊಂದೆಡೆ ಹಲವು ಭಾಗಗಳಲ್ಲಿ ನೀರಿಗಾಗಿ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ನೀರಿಗಾಗಿ ಮಹಿಳೆಯರು ಬಾವಿಗಿಳಿಯುವ ಸಾಹಸಮಯ ದೃಶ್ಯವೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ.

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಮಹಿಳೆಯರು ನೀರಿಗಾಗಿ ಪ್ರಾಣದ ಹಂಗು ತೊರೆದು ನೀರಿಗಾಗಿ ಬಾವಿಗಿಳಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇಲ್ಲಿ ಮಹಿಳೆಯರು ಒಂದೇ ಒಂದು ಬಿಂದಿಗೆ ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ದೂರ ಹೋಗುವುದು. ನೀರಿಗಾಗಿ ಮನೆಯ ಬಳಿ ಟ್ಯಾಂಕರ್‌ಗಳು ಬರುತ್ತಿದ್ದಂತೆ ಮುಗಿಬೀಳುವುದು  ಮಹಾನಗರಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಇದರ ಜೊತೆಯಲ್ಲಿ ಇಂತಹ ಪರಿಸ್ಥಿತಿಯನ್ನು ಮನಗಂಡು ಟ್ಯಾಂಕರ್‌ ಮಾಫಿಯಾ ಕೂಡ ಎಚ್ಚಾಗುತ್ತಿರುವುದು ಒಂದೆಡೆ. ಆದರೆ ಉತ್ತರ ಕರ್ನಾಟಕ, ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಬೇಸಿಗೆ ಬಂತ್ತೆಂದರೆ ನೀರಿಗಾಗಿ ಮಹಿಳೆಯರು ಕಿಲೋಮೀಟರ್‌ಗಟ್ಟಲೆ ಕೊಡಗಳನ್ನು ಹಿಡಿದು ನಡೆದುಕೊಂಡು ಹೋಗಿ ನೀರು ತರುತ್ತಾರೆ. ಇಂತಹದ್ದೇ ಒಂದು ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Author:

...
Ohileshwari K.M

Bulletin producer

prajashakthi tv

share
No Reviews