ಮಧುಗಿರಿ : ಪ್ರಜಾಶಕ್ತಿ ವರದಿಗೆ ಅಧಿಕಾರಿಗಳು ಫುಲ್ ಅಲರ್ಟ್ ..!

ಮಟನ್‌ ಮಾರ್ಕೆಟ್‌ ಸುತ್ತ ಪುರಸಭೆ ವತಿಯಿಂದ ಸ್ವಚ್ಚತೆ ಮಾಡುತ್ತಿರುವುದು.
ಮಟನ್‌ ಮಾರ್ಕೆಟ್‌ ಸುತ್ತ ಪುರಸಭೆ ವತಿಯಿಂದ ಸ್ವಚ್ಚತೆ ಮಾಡುತ್ತಿರುವುದು.
ತುಮಕೂರು

ಮಧುಗಿರಿ :

ಪ್ರಜಾಶಕ್ತಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡ್ತಿದೆ. ತುಮಕೂರು ಜನರ ನಾಡಿ ಮಿಡಿತವಾಗಿ, ಹಳ್ಳಿ- ಹಳ್ಳಿಗಳ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದೆ, ವರದಿ ಬಿತ್ತರಿಸಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಜನರ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ. ಇದೀಗ ಮಧುಗಿರಿ ಪಟ್ಟಣದ DYSP ಕಚೇರಿ ಸಮೀಪವೇ ಮಟನ್‌ ಮಾರ್ಕೆಟ್‌ ಇದ್ದು, ಇಲ್ಲಿ ಸ್ವಚ್ಛತೆ ಮರಿಚೀಕೆಯಾಗಿದ್ದು, ಗಬ್ಬೇದ್ದು ನಾರುತ್ತಿತ್ತು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಮಾರ್ಚ್‌ 3 ರಂದು ಸುದ್ದಿ ಬಿತ್ತರಿಸಿತ್ತು. ವರದಿ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ತುರ್ತು ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಹೌದು ಈ ಮಟನ್‌ ಮಾರ್ಕೆಟ್‌ನಲ್ಲಿ ಅಪ್ಪಿ ತಪ್ಪಿ ಮಾಂಸ ತಿಂದರೆ ರೋಗ ಹತ್ತಿಸಿಕೊಳ್ಳೋದಂತೂ ನಿಜ, ಅಲ್ಲದೇ ಮಟನ್‌ ಮಾರ್ಕೆಟ್‌ನ ತ್ಯಾಜ್ಯದ ಬಾವಿಯಲ್ಲಿ ತ್ಯಾಜ್ಯ ತುಂಬಿ ಹರಿಯುತ್ತಿದೆ. ಗಲೀಜುಗಳನ್ನು ತುಳಿದುಕೊಂಡು, ಮೂಗು ಮುಚ್ಚಿಕೊಂಡೇ ಮಾಂಸ ಖರೀದಿ ಮಾಡಿಕೊಂಡು ಜನರು ಹೋಗ್ತಾ ಇದ್ದರು. ಜೊತೆಗೆ ಇಷ್ಟು ಅಸ್ವಚ್ಛತೆಯಿಂದ ಇರೋ ಮಟನ್‌ ಅಂಗಡಿಗಳಲ್ಲಿ ಸಿಗೋ ಮಾಂಸ ಕೂಡ ಕ್ಲೀನ್‌ ಆಗಿ ಇರೋದಿಲ್ಲ, ಇಂತಹ ಅಸ್ವಚ್ಛತೆ ಕೂಡಿದ್ದರೂ ಕೂಡ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿರಲಿಲ್ಲ.

ಹೀಗಾಗಿ ಮಟನ್‌ ಮಾರ್ಕೆಟ್‌ನ ದುಸ್ಥಿತಿಯನ್ನು ಪ್ರಜಾಶಕ್ತಿ ವಿಸ್ತೃತವಾಗಿ ವರದಿ ಮಾಡಿ ಬಿತ್ತರಿಸಿತ್ತು. ವರದಿ ಮಾಡಿದ ಒಂದೇ ವಾರದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್ ನೇತೃತ್ವದಲ್ಲಿ ಮಟನ್ ಮಾರ್ಕೆಟ್ ಅಂಗಡಿ ಮಾಲೀಕರ ತುರ್ತು ಸಭೆ ಕರೆಯಲಾಗಿದ್ದು, ಸ್ವಚ್ಛತೆ ಬಗ್ಗೆ ಚರ್ಚೆ ನಡೆಸಲಾಗಿದೆ. ಅಲ್ಲದೇ ಮಟನ್‌ ಮಾರ್ಕೆಟ್‌ನಲ್ಲಿ ಪುರಸಭೆ ಸದಸ್ಯರು ಫುಲ್‌ ಕ್ಲೀನಿಂಗ್‌ ಮಾಡಿಸಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ವಿಚಾರವಾಗಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಗಂಭೀರವಾಗಿ ಚರ್ಚೆ ನಡೆಸಲಾಗಿದೆ.

ಮಟನ್‌ ಮಾರ್ಕೆಟ್‌ನ ಅಸ್ವಚ್ಛತೆ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕ್ಯಾರೆ ಅನ್ನದ ಅಧಿಕಾರಿಗಳು, ಪ್ರಜಾಶಕ್ತಿ ಟಿವಿಯಲ್ಲಿ ವರದಿ ಮಾಡಿದ ಕೂಡಲೇ ಕ್ರಮ ಕೈಗೊಂಡಿದ್ದು ಸ್ಥಳೀಯರು ಪ್ರಜಾಶಕ್ತಿ ಟಿವಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

 

Author:

share
No Reviews