ಗುಬ್ಬಿ :
ಗುಬ್ಬಿ ತಾಲೂಕಿನ ಅಳಿಲುಘಟ್ಟ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ನೂತನ ವಿಮಾನ ಗೋಪುರ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಶಾಸಕ ಎಸ್ ಆರ್ ಶ್ರೀನಿವಾಸ್, ತೇವಡೆಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಶಿವಚಾರ್ಯ ಸ್ವಾಮಿ, ಬೆಟ್ಟದಹಳ್ಳಿ ಗವಿ ಮಠಧ್ಯಕ್ಷರಾದ ಶ್ರೀ ಚಂದ್ರಶೇಖರಸ್ವಾಮಿ ಆ.ನ. ಲಿಂಗಪ್ಪ, ಸಂಜೀವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರಸ್ವಾಮಿ, ನಿವೃತ್ತ ಬಿಓ ಕೆಂಪರಂಗಯ್ಯ, ಮುಖಂಡರಾದ ಕೃಷ್ಣಪ್ಪ, ಶಿವರತ್ನ, ಲಕ್ಷ್ಮೀನಾರಾಯಣ್ ಕಂದಾಯಾಧಿಕಾರಿ ಗುರುಪ್ರಸಾದ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಇನ್ನು ಶಾಸಕ ಎಸ್. ಆರ್ ಶ್ರೀನಿವಾಸ್ ಮಾತನಾಡಿ ಸುಂದರವಾದ ದೊಡ್ಡ ದೇವಾಲಯ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ನಾನು ದೇವಾಲಯದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಗುಬ್ಬಿಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಭರವಸೆ ನೀಡಿದರು. ಅಲ್ದೇ ಈ ಗ್ರಾಮಕ್ಕೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಿದ್ದೇನೆ. ಬಹುತೇಕ ಎಲ್ಲ ರಸ್ತೆಗಳು ಮುಗಿದಿದ್ದು, ಸಣ್ಣಪುಟ್ಟ ರಸ್ತೆಗಳು ಬಾಕಿ ಇದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ತೇವಡೆಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಶಿವಚಾರ್ಯ ಸ್ವಾಮಿಗಳು ಮಾತನಾಡಿ ಪ್ರತಿದಿನ ಭಗವಂತನನ್ನು ಸ್ಮರಿಸಿದರೆ ಕಷ್ಟದ ಸಮಯದಲ್ಲಿ ಎಲ್ಲರನ್ನು ಕಾಪಾಡುತ್ತಾನೆ ಎಂದರು.
ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮಿಗಳು ಮಾತನಾಡಿ ದೇವನೊಬ್ಬ ನಾಮ ಹಲವು. ಇಡಿ ಜಗತ್ತೀನಲ್ಲಿ ಒಬ್ಬನೇ ದೇವರು ಇರುವುದು. ಆದರೆ ನಾಮಗಳು ಹಲವು ಅಂತಹ ದೇವರನ್ನು ಪೂಜಿಸುವುದು ನಮ್ಮ ಹಿಂದೂ ಧರ್ಮದ ಸಂಪ್ರದಾಯವಾಗಿದೆ ಎಂದರು.