ಕೋಡಿಗೇನಹಳ್ಳಿ ಪೊಲೀಸರು ಗ್ರಾಮಸ್ಥರಿಂದ ಮಾಹಿತಿ ಸ್ವೀಕರಿಸುತ್ತಿರುವುದು.ತುಮಕೂರು
ಮಧುಗಿರಿ :
ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದ್ದು, ನೂರಾರು ಮಂದಿ ಅಮಾಯಕ ಜೀವಗಳು ಬಲಿಯಾಗ್ತಿದ್ದಾವೆ. ಮೈಕ್ರೋ ಫೈನಾನ್ಸ್ ಹೆಸರಲ್ಲಿ ಸಾಲ ಕೊಡ್ತೀವಿ ಅಂತಾ ನಂಬಿಸಿ 35 ಮಂದಿಗೆ ಮೋಸ ಮಾಡಿ ಲಕ್ಷ ಲಕ್ಷ ದೋಚಿ ಪರಾರಿಯಾಗಿದ್ದ ಐನಾತಿ ಜೋಡಿ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷಗೊಂಡಿದೆ. ಪ್ರಜಾಶಕ್ತಿ ವರದಿ ಬಳಿಕ ವಂಚನೆ ಮಾಡಿದ್ದ ದಂಪತಿ ಪ್ರತ್ಯಕ್ಷಗೊಂಡಿದ್ದಲ್ಲದೇ, ಇವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಹೌದು ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ರತ್ನಮ್ಮ- ಪ್ರತಾಪ್ ದಂಪತಿ ಫೈನಾನ್ಸ್ನಲ್ಲಿ ಸಾಲ ಕೊಡಿಸ್ತೀವಿ ಅಂತೇಳಿ ಗ್ರಾಮದ 35 ಮಂದಿಗೆ ಮೋಸ ಮಾಡಿದ್ದರು. ಗ್ರಾಮಸ್ಥರಿಗೆ ಸಿಕ್ಕಿದ್ದ ಲೋನ್ ಹಣವನ್ನು ಪಡೆದು ದಂಪತಿ ಊರು ಬಿಟ್ಟಿದ್ದರು. ಇದರಿಂದ ಕಂಗಾಲಾದ ಊರಿನ ಜನರು ಪ್ರಜಾಶಕ್ತಿ ಮುಂದೆ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಪ್ರಜಾಶಕ್ತಿ ವರದಿ ಮಾಡಿದ್ದ ಬೆನ್ನಲ್ಲೇ ಪ್ರತಾಪ್- ರತ್ನಮ್ಮ ದಂಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದಂಪತಿಯನ್ನು ಕೊಡಿಗೇನಹಳ್ಳಿ ಪೊಲೀಸರು ಕರೆತಂದಿದ್ದಾರೆ. ನಿನ್ನೆ ತಡರಾತ್ರಿ 12 ಗಂಟೆವರೆಗೂ ದಂಪತಿಯನ್ನು ಸಿಪಿಐ ಹನುಮಂತರಾಯಪ್ಪ ಪಿಎಸ್ಐ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ವಿಚಾರಣೆ ಮಾಡಿದ್ದು, ದುಡ್ಡು ಪಡೆದುಕೊಂಡಿರೋದನ್ನ ಒಪ್ಪಿಕೊಂಡಿದ್ದು, ಹಣವನ್ನು ವಾಪಸ್ ಕೊಡ್ತೀವಿ ಎಂದು ಭರವಸೆ ನೀಡಿದ್ದಾರೆ.
ಪ್ರತಾಪ್ ಹಾಗೂ ರತ್ನಮ್ಮ ದಂಪತಿ ಮೇಲೆ ದೂರು ದಾಖಲಿಸಿಕೊಳ್ಳಲು ಸರಿಯಾದ ದಾಖಲೆ ಇಲ್ಲದ ಕಾರಣ, ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿ, ದಂಪತಿಯನ್ನು ಬಿಟ್ಟು ಕಳುಹಿಸಿದ್ದಾರೆ. ಗ್ರಾಮದ ಜನರಿಗೆ ಸೇರಬೇಕಾದ ಸಾಲದ ಹಣ ವಾಪಸ್ ನೀಡುವ ಭರವಸೆ ಕೊಟ್ಟಿದ್ದಾರೆ. ಪ್ರಜಾಶಕ್ತಿ ವರದಿ ಬಳಿಕ ಮೋಸ ಮಾಡಿದ ದಂಪತಿ ಪ್ರತ್ಯಕ್ಷಗೊಂಡಿದ್ದರಿಂದ ಗ್ರಾಮಸ್ಥರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಪ್ರಜಾಶಕ್ತಿಯಿಂದ ನಮಗೆ ನ್ಯಾಯ ಸಿಗುತ್ತೆ ಎಂದು ಗ್ರಾಮಸ್ಥರಲ್ಲಿ ವಿಶ್ವಾಸ ಮೂಡಿದ್ದು, ಪ್ರಜಾಶಕ್ತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.