ಕೊರಟಗೆರೆ : ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಸುಮೋಟೋ ಕೇಸ್ ಗೆ ಡಿಸಿ ಸೂಚನೆ

ಡಿಸಿ ಶುಭಕಲ್ಯಾಣ್‌, ಎಸ್‌ಪಿ ಅಶೋಕ್‌ ಭೇಟಿ ನೀಡಿ, ಪರಿಶೀಲನೆ
ಡಿಸಿ ಶುಭಕಲ್ಯಾಣ್‌, ಎಸ್‌ಪಿ ಅಶೋಕ್‌ ಭೇಟಿ ನೀಡಿ, ಪರಿಶೀಲನೆ
ತುಮಕೂರು

ಕೊರಟಗೆರೆ:

ಕೊರಟಗೆರೆ ತಾಲೂಕಿನಲ್ಲಿ ದಿನೇ ದಿನೆ ಮೈಕ್ರೋ ಫೈನಾನ್ಸ್‌ಗಳ ಕಾಟ ಮಿತಿ ಮೀರಿದ್ದು, ನಿನ್ನೆ ಹನುಮಂತಪುರದಲ್ಲಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ್ದರು. ಇತ್ತ ಫೈವ್‌ ಸ್ಟಾರ್‌ ಕಂಪನಿ ಕಾಟಕ್ಕೆ ಕುರಂಕೋಟೆ ಗ್ರಾಮದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ದಂಪತಿ ಮನೆ ಬಿಟ್ಟು ಹೋಗಿರುವ ಮನೆಗೆ ಡಿಸಿ ಶುಭಕಲ್ಯಾಣ್‌, ಎಸ್‌ಪಿ ಅಶೋಕ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ವೇಳೆ ಅಕ್ಕ- ಪಕ್ಕದ ಮನೆಯವರೊಂದಿಗೆ ಡಿಸಿ ಶುಭಕಲ್ಯಾಣ್‌ ಹಾಗೂ ಎಸ್‌ಪಿ ಅಶೋಕ್‌ ಚರ್ಚೆ ನಡೆಸಿದರು. ಈ ವೇಳೆ ಕುರಂಕೋಟೆ ಗ್ರಾಮದ ರೈತನ ಮನೆ ಮೇಲೆ ಬರೆದಿರುವ ಬರಹ ಕಂಡು ತಕ್ಷಣ ಬ್ಯಾಂಕಿನ ವ್ಯವಸ್ಥಾಪಕನ ಮೇಲೆ ಸುಮೋಟೊ ಪ್ರಕರಣ ದಾಖಲಿಸಲು ಡಿಸಿ ಖಡಕ್‌ ಸೂಚನೆ ನೀಡಿದ್ದಾರೆ. ಅಲ್ಲದೇ ಕುಟುಂಬವೊಂದಕ್ಕೆ ದಾಖಲೆ ಪರಿಶೀಲನೆ ನಡೆಸದೇ ನಾಲ್ಕೆದು ಬ್ಯಾಂಕಿನಲ್ಲಿ ಸಾಲ ನೀಡಿ ದಬ್ಬಾಳಿಕೆ ಮಾಡಿ ವಸೂಲಾತಿ ಮಾಡಿದರೇ ಹೇಗೆ ಎಂದು ಜಿಲ್ಲಾಧಿಕಾರಿ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಡಿಸಿ ಶುಭಕಲ್ಯಾಣ್‌,  ಫೈನಾನ್ಸ್ ಕಂಪನಿಯವರು ವಸೂಲಾತಿ ನೆಪದಲ್ಲಿ ಸಾಲಗಾರನ ಮೇಲೆ ದಬ್ಬಾಳಿಕೆ ನಡೆಸಿದರೆ ಕಾನೂನು ಪ್ರಕಾರ ಕ್ರಮ ಆಗೋದು ಖಚಿತ. ಫೈವ್‌ಸ್ಟಾರ್ ಮತ್ತು ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ಕಂಪನಿಗಳು ದಬ್ಬಾಳಿಕೆ ಮಾಡಿರೋದು ಗೊತ್ತಾಗಿದ್ದು, ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲು ಸ್ಥಳದಲ್ಲೇ ಡಿಸಿ ಶುಭಕಲ್ಯಾಣ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

 

Author:

share
No Reviews