ಮಧುಗಿರಿ :
ಇತ್ತೀಚಿನ ದಿನಗಳಲ್ಲಿ ಮನೆ ಮುಂದಿದ್ದ ಬೈಕ್‌ಗಳು, ಕಾರುಗಳನ್ನು ಎಗರಿಸೋ ಖದೀಮರು ಹೆಚ್ಚಾಗಿದ್ದಾರೆ. ಮನೆ ಮುಂದೆ ಗಾಡಿ ನಿಲ್ಲಿಸಿದ್ದ ಗಾಡಿಗಳು ರಾತ್ರಿ ಕಳೆದು ಬೆಳಗಾಗೋವಷ್ಟರಲ್ಲಿ ಮಾಯವಾಗ್ತಾ ಇವೆ. ಈಗ ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿಯಲ್ಲೂ ಬೈಕ್ ಕಳ್ಳರು ಲಗ್ಗೆ ಇಟ್ಟಿದ್ದು, ಮನೆ ಮುಂದಿದ್ದ ಬೈಕ್ ಇದ್ದಕ್ಕಿದ್ದ ಹಾಗೆ ಮಾಯವಾಗಿದೆ. ಐಡಿ ಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದಲ್ಲಿ ರಾತ್ರಿ ಮನೆ ಮುಂದಿದ್ದ ಬೈಕ್ ಕಳ್ಳತನವಾಗಿರೋ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕದಾಳವಟ್ಟ ಗ್ರಾಮದ ನರಸಿಂಹಮೂರ್ತಿ ಎಂಬುವವರ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಸ್ಪೆಂಡರ್ ಫ್ಲಸ್ ಬೈಕ್‌ನನ್ನು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಮನೆಯ ಆಸುಪಾಸಿನಲ್ಲಿ ಗ್ಯಾಂಗ್‌ವೊಂದು ಕುಡಿದು ಕುಳಿತಿತ್ತು. ಈ ಗ್ಯಾಂಗ್‌ನವರೇ ಬೈಕ್ ಕದ್ದು ಎಸ್ಕೇಪ್ ಆಗಿದ್ದಾರೆ ಅನ್ನೋ ಶಂಕೆ ಇದ್ದು, ಈ ಬಗ್ಗೆ ಬೈಕ್ ಮಾಲೀಕ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಬೈಕ್ ಕದ್ದ ಖದೀಮರಿಗಾಗಿ ಬಲೆ ಬೀಸಿದ್ದಾರೆ.
ಬೈಕ್‌ನನ್ನು ಕುಡಿದ ಮತ್ತಲ್ಲಿ ತೆಗೆದುಕೊಂಡು ಹೋಗಿದ್ದಾರೋ ಅಥವಾ ಉದ್ದೇಶಪೂರ್ವಕವಾಗಿಯೇ ಬೈಕ್ ಕದ್ದಿದ್ದಾರೋ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಲಿದೆ.