ತುಮಕೂರು :
ಮಧುಗಿರಿ, ಕೊರಟಗೆರೆ, ತುರುವೇಕೆರೆ ತಾಲೂಕಿನ ಭೂ ರಹಿತರು ಮತ್ತು ವಸತಿ ರಹಿತರು ತಮಗೆ ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಹೋರಾಟ ಇಂದಿಗೆ 8 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ತಮಟೆ ಬಡಿಯುವ ಮೂಲಕ ಪ್ರತಿಭಟನಾಕಾರರು ತಮ್ಮ ನೋವನ್ನು ಹೊರಹಾಕಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಇತ್ತ ತಿರುಗಿಯು ನೋಡ್ತಿಲ್ಲ ಅಂತ ಹೋರಾಟಗಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಡಿಸಿ ಕಚೇರಿ ಎದುರು ಕಳೆದ 8 ದಿನಗಳಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಅಂತ ಪತ್ರಿಭಟನೆ ನಡೆಸಲಾಗ್ತಿದೆ. ಆದರೆ ಭೂಮಿ ಮತ್ತು ವಸತಿ ಹಕ್ಕು ಹೋರಾಟಗಾರರ ಪ್ರತಿಭಟನೆಗೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಗಾಳಿ, ಮಳೆ ಬಿಸಿಲಿನಲ್ಲಿ ಹೋರಾಟ ಮಾಡುತ್ತಿದ್ದರು ಅಧಿಕಾರಿಗಳು ಬರುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಹಂದ್ರಾಳ್ ನಾಗಭೂಷಣ್ ಮಾತನಾಡಿ, ಭೂಮಿ ಮತ್ತು ವಸತಿ ಹಕ್ಕು ನೀಡಬೇಕೆಂದು ಆಗ್ರಹಿಸಿ ನಾವು ಕಳೆದ 8 ದಿನಗಳಿಂದ ಹೋರಾಟ ಮಾಡ್ತಿದ್ದಿವಿ. ಆದರೆ ಅಧಿಕಾರಿಗಳು ಮಾತ್ರ ನಮ್ಮತ್ತ ತಿರುಗಿ ಕೂಡ ನೋಡ್ತಿಲ್ಲ. ಕೆಲವು ತಾಲೂಕಿನ ತಹಶೀಲ್ದಾರ್ ಮತ್ತು ಎಸಿಗಳು ಇತ್ತ ಮೂಸಿಯು ನೋಡ್ತಿಲ್ಲ. ನಾವು ನಮ್ಮ ಕುಟುಂಬಗಳು 8 ದಿನದಿಂದ ಇಲ್ಲಿಯೇ ಬೀಡುಬಿಟ್ಟಿದ್ದೇವೆ ಆದರೆ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ ಅಂತ ತಮ್ಮ ಅಳಲನ್ನು ತೋಡಿಕೊಂಡರು.
ಇನ್ನು ಮತ್ತೊಬ್ಬ ಹೋರಾಟಗಾರ ಮಾತನಾಡಿ ನಮ್ಮ ಸಮಿತಿಯಿಂದ 8 ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಆದರೆ ಯಾವೊಬ್ಬ ಅಧಿಕಾರಿ ಕೂಡ ಇತ್ತ ತಿರುಗಿ ನೋಡಿಲ್ಲ. ತಹಶೀಲ್ದಾರ್, ಆರ್ ಐ, ಎಸಿ ಯಾರು ಕೂಡ ಬಂದಿಲ್ಲ. ಬಂದು ಕೂಡ ಆ ಕ್ಷಣಕ್ಕೆ ಏನೋ ಸಮಾಧಾನ ಮಾಡಿ ಹೋಗ್ತಾರೆ ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿತ್ತಿಲ್ಲ. ನಮ್ಮ ಸಮಸ್ಯೆ ಬಗೆಹರಿಯುವವರೆಗೂ ನಾವು ಈ ಜಾಗಬಿಟ್ಟು ಕದಲೊಲ್ಲ ಅಂತ ಹೇಳಿದ್ದಾರೆ.