ಶಿರಾ :
ಶಿರಾ ತಾಲೂಕಿನ ಹೆಂದೊರೆ ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ತುಮಕೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ ಶಿರಾ ತಾಲೂಕಿನ 7.ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮವನ್ನು ಹಸುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕುವ ಮೂಲಕ ಶಾಸಕ ಟಿ ಬಿ ಜಯಚಂದ್ರ ಉದ್ಘಾಟಿಸಿದರು.
ಶಾಸಕ ಟಿ ಬಿ ಜಯಚಂದ್ರ ಮಾತನಾಡಿ ಶಿರಾ ತಾಲೂಕಿನ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಶಕ್ತಿ ಮೀರಿ ಅನುದಾನ ತರುತ್ತಿದ್ದೇನೆ ಅಂತ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಡಾ.ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ. ಶಿರಾ ಭಾಗಕ್ಕೆ ವಿಮಾನ ನಿಲ್ದಾಣ ತರಬೇಕೆಂಬುದು ನನ್ನ ಬಯಕೆ. ನಾನು ಗುರಿ ಇಟ್ಟರೆ ಸಾಧಿಸುವ ತನಕ ವಿಶ್ರಮಿಸುವ ಮಾತೇ ಇಲ್ಲ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ ಬಿ ಜಯಚಂದ್ರ ಹೇಳಿದರು. ಈ ವೇಳೆ ಅತಿ ಹೆಚ್ಚು ಹಾಲು ಕರೆಯುವ ರಾಸುಗಳ ರೈತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ, ಹೆಂದೊರೆ ಗ್ರಾಮ ಪಂಚಾಯಿತಿ ಸದಸ್ಯರು, ಪಶು ಸಹಾಯಕ ನಿರ್ದೇಶಕ ಡಾ.ಸಿ.ಎಸ್.ರಮೇಶ್, ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳು ಸದಸ್ಯರು, ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.