ಮಧುಗಿರಿ:
ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಪಶು ಪಾಲನಾ ಇಲಾಖೆ ಹಾಗೂ ತುಮುಲ್ ವತಿಯಿಂದ ನಡೆದ ಮಿಶ್ರ ತಳಿ ಕರು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ತುಮುಲ್ ನಿರ್ದೇಶಕ ಬಿ.ವಿ ನಾಗೇಶ್ ಬಾಬು ಉದ್ಘಾಟಿಸಿದರು. ಈ ವೇಳೆ ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ಸಿದ್ಧನಗೌಡ, ಗ್ರಾ ಪಂ ಅಧ್ಯಕ್ಷ ಮಿಲ್ ಶ್ರೀನಿವಾಸ್, ತುಮುಲ್ ವಿಸ್ತರಣಾಧಿಕಾರಿ ರಂಜಿತ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಂಗಾಧರಯ್ಯ, ಕಾರ್ಯದರ್ಶಿ ಮಧುಸೂಧನ್ ಸೇರಿ ಹಲವರು ಹಾಜರಿದ್ದರು. ಮಿಶ್ರ ತಳಿ ಕರು ಪ್ರದರ್ಶನದಲ್ಲಿ ಭಾಗಿಯಾಗಿದ್ದ ಉತ್ತಮ ಕರುಗಳಿಗೆ ಬಹುಮಾನ ವಿತರಣೆ ಮಾಡಿಲಾಯಿತು.
ಈ ವೇಳೆ ಮಾತನಾಡಿದ ತುಮುಲ್ ನಿರ್ದೇಶಕ ಬಿ.ವಿ ನಾಗೇಶ್ ಬಾಬು, ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರ ತಳಿ ಕರು ಪ್ರದರ್ಶನದಲ್ಲಿ ನೂರು ಕರುಗಳು ಭಾಗಿಯಾಗಿದ್ದು, ಉತ್ತಮ ಕರುಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಣೆ ಮಾಡಲಾಗುತ್ತಿದೆ ಎಂದರು. ಅಲ್ಲದೇ ತುಮುಲ್ ಒಕ್ಕೂಟವು ರೈತರ 1 ಲೀಟರ್ ಹಾಲಿಗೆ ಎರಡು ರೂಪಾಯಿ ಏರಿಕೆ ಮಾಡಿದ್ದು, ಯುಗಾದಿ ಹಬ್ಬದ ಒಳಗೆ ಹಾಲಿನ ಮಾರಾಟದ ಮೇಲೆ 3 ರಿಂದ 5 ರೂ ಹೆಚ್ಚಿಸಿ ನೇರವಾಗಿ ಆ ಹಣವನ್ನು ರೈತರಿಗೆ ನೀಡಲು ಸಿಎಂ ಹಾಗೂ ಸಹಕಾರಿ ಸಚಿವರ ನಡುವೆ ಚರ್ಚೆ ನಡೆಯುತ್ತಿದ್ದು, ಹೆಚ್ಚುವರಿ ಹಣ ಒಂದು ತಿಂಗಳೋಳಗೆ ಸೇರಿಲಿದೆ ಎಂದು ಹೇಳಿದರು.
KMF ನಿರ್ದೇಶಕ ಕಾಂತರಾಜು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯವರೇ ಆಗಿದ್ದು, ಹೈನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ಕಾಣಲಿದೆ. ಸಂಘದ ಬೆಳವಣಿಗೆ ಸದಸ್ಯರು ಗುಣಮಟ್ಟದ ಹಾಲು ಪೂರೈಸಿದರೆ ಸಂಘ ಇನ್ನು ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಗಿರೀಶ್ ಬಾಬು ರೆಡ್ಡಿ ಮಾತನಾಡಿ, ಶೇ 90 ರಷ್ಟು ಕರುಗಳು ಸಾಕಾಣಿಕೆಯಲ್ಲಿ ಉತ್ತಮವಾಗಿಲ್ಲ, ವೈಜ್ಞಾನಿಕವಾಗಿ ಹಾಗೂ ಕರುಗಳನ್ನು ಉತ್ತಮ ಪೋಷಣೆ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರುಗಳ ಬೆಳವಣಿಗಗೆ ಕ್ಯಾಲ್ಶಿಯಂ, ಮೆಗ್ನಿಶಿಯಂ ನೀಡಿದಾಗ ಕರುಗಳ ಬೆಳವಣಿಗೆಗೆ ಪೂರಕವಾಗಿರುತ್ತದೆ ಎಂದರು.