ಮಧುಗಿರಿ:
ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಸಿನಾಯಕನಹಳ್ಳಿ ಗ್ರಾಮದಲ್ಲಿ ಸರಳೀಕೃತ ದರಕಾಸ್ತು ಪೋಡಿ ಆಂದೋಲನ ಮತ್ತು ಭೂ ದಾಖಲೆ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ 14 ಮಂದಿ ರೈತರಿಗೆ ಸಾಗುವಳಿ ಚೀಟಿಯನ್ನು ಸಚಿವ ರಾಜಣ್ಣ ವಿತರಿಸಿದರು. ಈ ವೇಳೆ ಉಪವಿಭಾಗಧಿಕಾರಿ ಗೊಟೂರು ಶಿವಪ್ಪ, ತಹಶಿಲ್ದಾರ್ ಶಿರೀನ್ ತಾಜ್, ಬ್ಲಾಕ್ ಕಾಂಗ್ರೆಸ್ ಮುಖಂಡ ಅದಿನಾರಯಣ ರೆಡ್ಡಿ, ಪಿಡಿಒ ನವೀನ್ ಕುಮಾರ್, ಉಪ ತಹಶೀಲ್ದಾರ್ ಸುದರ್ಶನ್, ಗ್ರಾಪಂ ಅಧ್ಯಕ್ಷೆ ರಾಮಾಂಜಿನಮ್ಮ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.
ತಾಲೂಕಿನ ಕಾಳೇನಹಳ್ಳಿ, ಕಸಿನಾಯಕನಹಳ್ಳಿಯಲ್ಲಿ ರೈತರಿಗೆ ಮಂಜೂರಾದ ಭೂಮಿಯ ದಾಖಲೆಯನ್ನು ವಿತರಣೆ ಮಾಡಲಾಯಿತು. ತಾಲೂಕಿನಲ್ಲಿ 2 ಸಾವಿರಕ್ಕೂ ಹೆಚ್ಚು ಇಂತಹ ಪ್ರಕರಣಗಳು ಇದ್ದು ಅರ್ಹ ರೈತರಿಗೆ ಭೂಮಿ ಮಂಜೂರು ಮಾಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ರಾಜಣ್ಣ ರೈತರಿಗೆ ಭರವಸೆ ನೀಡಿದರು.
ಇನ್ನು ಮಧುಗಿರಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಮಂಜಿನಮ್ಮ ತನ್ನ ಪತಿ ಶಿವಯ್ಯ ಸುಮಾರು 15 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು ಭೂಮಿ ಮಂಜೂರಗಿದ್ದರೂ ಇದುವರೆಗೂ ಸಾಗುವಳಿ ಚೀಟಿ ಸಿಕ್ಕಿರಲಿಲ್ಲ. ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಪತ್ನಿ ಕೈಯಲ್ಲೇ ಪತಿಗೆ ಸಾಗುವಳಿ ಚೀಟಿ ವಿತರಣೆ ಮಾಡಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ 1991-92ರಲ್ಲಿ ಭೂ ಮಂಜೂರಾಗಿದ್ದರೂ ಖಾತೆ ಪಹಣಿಯಾದೆ ಪಹಣಿಗಳಲ್ಲಿ ಪೈಕಿ ಎಂದು ನಮೂದಾಗುತಿದ್ದ ಕಾರಣ ರೈತರಿಗೆ ಸರ್ಕಾರಿ ಸವಲತ್ತುಗಳು ಸಿಗುತ್ತಿರಲಿಲ್ಲ, ಇಂದು ಈ ಸಮಸ್ಯೆಗಳಿಗೆ ಅಂತ್ಯ ಹಾಡಲಾಗಿದೆ ಎಂದರು. ಅಲ್ಲದೇ ದಶಕಗಳಿಂದ ಬಗೆಹರಿಯದ ಸಮಸ್ಯೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಸಾಗುವಳಿ ಚೀಟಿಯನ್ನು ಹಂಚಿಕೆ ಮಾಡಲು ಶ್ರಮಿಸಿದ್ದಾರೆ ಎಂದರು. ಇನ್ನು ಮುಂದೆ ಕಂದಾಯ ಇಲಾಖೆ ಸಂಪೂರ್ಣ ಆನ್‌ಲೈನ್ ವ್ಯವಸ್ಥೆಯಾಗುತ್ತಿದ್ದು ಮುಂದೆ ನಕಲಿ, ತಿದ್ದುವುದು ಇದು ಯಾವುದಕ್ಕೂ ಅವಕಾಶವಿರುವುದಿಲ್ಲ ಎಂದರು. ಅಲ್ಲದೇ ಭೂಮಿ ಮಂಜೂರದ ರೈತರಿಗೆ ಸಂಪೂರ್ಣ ದಾಖಲೆಯೊಂದಿಗೆ ನೀಡಲಾಗಿದೆ. ದುಡ್ಡು ಸಾಲದ ರೂಪದಲ್ಲಿ ಪಡೆಯಬಹುದು ಆದರೆ ಭೂ ಪಡೆಯಲು ಸಾಧ್ಯವಿಲ್ಲ ಯಾವುದೆ ಕಾರಣಕ್ಕೂ ರೈತರು ಭೂ ಮಾರಾಟ ಮಾಡಬಾರದು ಎಂದು ಹೇಳಿದರು.