ಮಧುಗಿರಿ : ಗಡಿನಾಡಲ್ಲೊಬ್ಬ ಗುಬ್ಬಚ್ಚಿ ಪ್ರೇಮಿ

ಮಧುಗಿರಿ:

ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಸಂತತಿ ಕಡಿಮೆ ಆಗಿದ್ದು, ಗುಬ್ಬಚ್ಚಿಗಳನ್ನು ಕಾಣಸಿಗುವುದೇ ಅಪರೂಪ, ಇನ್ನು ಗುಬ್ಬಚ್ಚಿಯ ಚಿಲಿ ಪಿಲಿ ಸದ್ದೇ ಇಲ್ಲದಂತಾಗಿದೆ. ಇಂದಿನ ಪೀಳಿಗೆಯ ಮಕ್ಕಳಿಗೆ ಗುಬ್ಬಚ್ಚಿಯನ್ನು ಪೋಟೋಗಳಲ್ಲಿ ಮಾತ್ರ ತೋರಿಸುವಂತಾಗಿದೆ. ಈ ನಡುವೆ ಇಲ್ಲೊಬ್ಬ ರೈತ ತನ್ನ ಮನೆಯ ಮುಂದೆ ಗುಬ್ಬಚ್ಚಿ ಗೂಡಿನಿಂದ ಸಿಂಗಾರ ಮಾಡಿದ್ದು, ಮನೆ ತುಂಬೆಲ್ಲಾ ಗುಬ್ಬಚ್ಚಿಗಳ ಚಿಲಿಪಿಲಿ ಕಲರವೇ ಕೇಳಿಸ್ತಾ ಇದೆ.

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಜಯಮಂಗಲಿ ನದಿ ಅಂಚಿನಲ್ಲಿ ವಾಸಿಸ್ತಿರೋ ಆಶ್ವತ ನಾರಾಯಣ ರೆಡ್ಡಿ ಎಂಬುವವರು ತಮ್ಮ ಮನೆ ಅಂಗಳದಲ್ಲಿ ಗುಬ್ಬಚ್ಚಿ ಗೂಡುಗಳನ್ನು ನಿರ್ಮಿಸಿದ್ದಾರೆ. ಇವರು ಮೂಲತಃ ಕೃಷಿಕರಾಗಿದ್ದು, ಇತ್ತೀಚೆಗೆ ಕೃಷಿಯಿಂದ ಬೇಸತ್ತು ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದರು, ಒಮ್ಮೆ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿ ತನ್ನ ಜಮೀನಿನಲ್ಲಿ ಸಿಕ್ಕ ಒಂದೆರೆಡು ಗೂಡು ತಂದು ಮನೆಯಲ್ಲಿ ಕಟ್ಟಿದ್ರು, ಕಾಲ ಕ್ರಮೇಣ ಇದರಲ್ಲಿ ಗುಬ್ಬಚ್ಚಿಗಳು ಬಂದು ವಾಸ ಮಾಡಲು ಆರಂಭಿಸಿದ್ದು, ಇದೀಗ ಮನೆಯೆಲ್ಲ ಗುಬ್ಬಚ್ಚಿ ಗೂಡುಗಳನ್ನು ಕಟ್ಟಿದ್ದು, ಸುಮಾರು 30ಕ್ಕೂ ಅಧಿಕ ಗುಬ್ಬಚ್ಚಿಗಳು ಸುಮಾರು 8 ವರ್ಷಗಳಿಂದ ಇಲ್ಲಿ ವಾಸ ಮಾಡ್ತಿವೆಯಂತೆ, ಇನ್ನು ಗುಬ್ಬಚ್ಚಿಗಳ ಸಂತತಿ ಹೆಚ್ತಿದ್ದು ವರ್ಷವಿಡೀ ಇಲ್ಲಿ ಗುಬ್ಬಚ್ಚಿಗಳನ್ನು ಕಾಣಬಹುದಾಗಿದೆ.

ರೈತ ಅಶ್ವತ್ತ ನಾರಾಯಣ ಮಾತನಾಡಿ ಪೂರ್ವಜರ ಕಾಲದಿಂದಲೂ ನಮ್ಮದು ಕೃಷಿಕ ಕುಟುಂಬ, ಆದರೆ ಇತ್ತೀಚಿಗೆ ಕೃಷಿ ಮಾಡೋದು ದೊಡ್ಡ ಸವಾಲಾಗಿದೆ. ತಮ್ಮ ಜಮೀನಿನಲ್ಲಿ  ಮೊದಲು ಭತ್ತ ಬೆಳೆಯುತ್ತಿದ್ದೇವು , ಆಗ ಗುಬ್ಬಚ್ಚಿಗಳು ಹಿಂಡು ಹಿಂಡಾಗಿ ಬರುತ್ತಿದ್ವು. ಆದರೆ ಇತ್ತೀಚೆಗೆ ಗುಬ್ಬಚ್ಚಿಗಳು ಕಣ್ಮರೆಯಾಗಿದೆ, ಆದರೆ ನಮ್ಮ ಮನೆ ಬಳಿ ದಿನನಿತ್ಯ ಗುಬ್ಬಚ್ಚಿ ಚಿಲಿಪಿಲಿ ನಾದ ಕೇಳಲು ಆನಂದವಾಗುತ್ತೇ ಎಂದು ಸಂತಸ ವ್ಯಕ್ತಪಡಿಸಿದರು.

Author:

share
No Reviews