ಶಿರಾ :
ಶಿರಾ ನಗರದಲ್ಲಿ ಎಲ್‌ಟಿಎಬಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಗೆ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಡಾ.ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.
ಇನ್ನು ಜ್ಯೋತಿನಗರದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ನಿಯಮಿತ ವತಿಯಿಂದ ಕಾಮಗಾರಿ ನಡೆಯುತ್ತಿದ್ದು. ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ನಗರ ಹೊರತುಪಡಿಸಿ, ತಾಲ್ಲೂಕು ಕೇಂದ್ರದಲ್ಲಿ ಎಲ್.ಟಿ.ಎ.ಬಿ.ಕೇಬಲ್ ಮತ್ತು ಹೆಚ್.ಟಿ.ಪವರ್ಡ್ ಕಂಡಕ್ಟರ್ ಅಳವಡಿಕೆ ಮಾಡಲಾಗುತ್ತಿದೆ. ವಿದ್ಯುತ್ ಸೋರಿಕೆ ತಡೆಗಟ್ಟುವುದರ ಜೊತೆಗೆ ಉಳಿತಾಯದೊಂದಿಗೆ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ಎಲ್‌ಟಿಎಬಿ ವಿದ್ಯುತ್ ಕೇಬಲ್ ಅಳವಡಿಸಲಾಗುವುದು. ಮಳೆಗಾಲದ ಸಂದರ್ಭ ವಿದ್ಯುತ್ ಅಡಚಣೆ, ಸೋರಿಕೆ ಹಾಗೂ ಅಪಘಾತ ನಿಯಂತ್ರಿಸುವ ಜೊತೆಗೆ ವಿದ್ಯುತ್ ಅಕ್ರಮ ಸಂಪರ್ಕಕ್ಕೆ ಕಡಿವಾಣ ಹಾಕಲು ಇಂತಹ ಕೇಬಲ್ ಅಳವಡಿಕೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ವೃತ್ತ ಅಧೀಕ್ಷಕರಾದ ನರಸಿಂಹಮೂರ್ತಿ,ಮಧುಗಿರಿ ವಿಭಾಗ ಕಾರ್ಯಪಾಲಕ ಅಭಿಯಂತರ ಜಗದೀಶ್,ಶಿರಾ ನಗರ ಕಾರ್ಯಪಾಲಕ ಅಭಿಯಂತರ ಶಾಂತರಾಜು, ಸೇರಿದಂತೆ ನಗರಸಭೆ ಸದಸ್ಯ ಮತ್ತಿತರ ಹಾಜರಿದ್ದರು.