ತುಮಕೂರು : ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್ ಪಾಸ್ ಅವ್ಯವಸ್ಥೆ ಕುರಿತು ಪ್ರಜಾಶಕ್ತಿ ಹಲವು ಭಾರಿ ಸುದ್ದಿ ಮಾಡಿತ್ತು. ಮಳೆಗಾಲದಲ್ಲಿ ಅಂಡರ್ ಪಾಸ್ ಅಡಿಯಲ್ಲಿ ನೀರು ತುಂಬಿಕೊಂಡು ಮೋರಿಯಂತಾಗಿ ಜನರು ಜೀವಭಯದಲ್ಲಿಯೇ ಓಡಾಡುವಂತಾಗಿತ್ತು. ಇತ್ತ ರಸ್ತೆಯ ಮೇಲೆ ಹಾಕಿದ್ದ ಕಂಬಿಗಳು ಕಟ್ ಆಗಿದ್ದು ಯಾವಾಗ ಬೇಕಾದರೂ ಅವಘಡ ಸಂಭವಿ ಪ್ರಾಣಹಾನಿ ಆಗುವಂತಿತ್ತು. ಇಂತಹ ದುಸ್ಥಿತಿಯ ಕುರಿತು ಸುದ್ದಿ ಮಾಡಿದಾಗ ಅಧಿಕಾರಿಗಳು ಕೇವಲ ನೆಪಮಾತ್ರಕ್ಕೆ ಬಂದು ತ್ಯಾಪೆ ಹಾಕುವಂತಹ ಕೆಲಸ ಮಾಡ್ತಾ ಇದ್ರೂ. ಆದ್ರೆ ಛಲ ಬಿಡದ ನಿಮ್ಮ ಪ್ರಜಾಶಕ್ತಿ ಟಿವಿ ನಿರಂತವಾಗಿ ಸುದ್ದಿಬಿತ್ತರಿಸಿತ್ತು. ಕೊನೆಗೂ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮತ್ತು ಪಾಲಿಕೆಯ ಅಧಿಕಾರಿಗಳು ಈ ರಸ್ತೆ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಹೌದು, ಈ ಅಂಡರ್ ಪಾಸ್ ತುಮಕೂರು-ಕುಣಿಗಲ್ ಮಾರ್ಗವಾಗಿ ಮೈಸೂರ್ , ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಂತಹ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದ್ರೆ ಈ ಅಂಡರ್ ಪಾಸ್ ಮಾತ್ರ ಸಾವಿಗೆ ದಾರಿಯಾಗಿತ್ತು. ಕಾರಣ ಇಲ್ಲಿ ಕಿತ್ತುಕೊಂಡು ಬಂದಿದ್ದ ರಸ್ತೆಗೆ ಹಾಕಿದ್ದ ಕಂಬಿಗಳು. ವಾಹನ ಸವಾರ ಸ್ವಲ್ಪ ಯಾಮಾರಿದ್ರೂ ಯಮಲೋಕ ಸೇರೋದು ಗ್ಯಾರೆಂಟಿ ಆಗಿತ್ತು. ನಮ್ಮ ಸುದ್ದಿಗೆ ಎಚ್ಚೆತ್ತ ಅಧಿಕಾರಿಗಳು ಇಂದು ದುರಸ್ಥಿ ಕಾಮಗಾರಿಗೆ ಮುಂದಾಗಿದ್ದಾರೆ. ಇಂದು ಸ್ವತಃ ಗೃಹ ಸಚಿವರೇ ಬಂದು ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದ್ರು. ಈ ವೇಳೆ ಶಾಸಕ ಜ್ಯೋತಿ ಗಣೇಶ್, ಡಿಸಿ ಶುಭಾ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ, ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.
ಇಂದಿನಿಂದ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಈ ರಸ್ತೆಯಲ್ಲಿ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, 1 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ತಿಳಿಸಿದೆ. ಇನ್ನು ನಗರದ ಲಕ್ಕಪ್ಪ ಸರ್ಕಲ್ ಇಂದ ಕುಣಿಗಲ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಲಕ್ಕಪ್ಪ ಸರ್ಕಲ್ ನಿಂದ ಗುಬ್ಬಿ ರಿಂಗ್ ರಸ್ತೆ ಜಂಕ್ಷನ್ ಗೆ ಹೋಗಿ ಅಲ್ಲಿಂದ ಕುಣಿಗಲ್ ಜಂಕ್ಷನ್ ಗೆ ತಲುಪಬೇಕು. ಕುಣಿಗಲ್ ಕಡೆಯಿಂದ ಲಕ್ಕಪ್ಪ ಸರ್ಕಲ್ ಕಡೆಗೆ ಬರುವ ವಾಹನಗಳು ಕುಣಿಗಲ್ ಜಂಕ್ಷನ್-ಗುಬ್ಬಿ ರಿಂಗ್ ರಸ್ತೆ ಜಂಕ್ಷನ್ ಗೆ ಬಂದು ಲಕ್ಕಪ್ಪ ಸರ್ಕಲ್ಗೆ ತಲುಪಬೇಕಾಗಿದೆ.
ಇತ್ತ ಸದಾಶಿವನಗರ, ಬನಶಂಕರಿ, ಎಸ್.ಎಸ್.ಐಟಿ. ಕಾಲೇಜಿನ ಕಡೆಗಳಿಂದ ಬರುವ ವಾಹನಗಳು ಲಕ್ಕಪ್ಪ ಸರ್ಕಲ್ ಕಡೆಗೆ ಹೋಗಲು ಹೇಮಾವತಿ ಕಛೇರಿ ಮುಂಭಾಗದ ರಸ್ತೆಯ ಮೂಲಕ ದಾನಾ ಪ್ಯಾಲೇಸ್ ತಲುಪಿ. ಅಲ್ಲಿಂದ ಗುಬ್ಬಿ ರಿಂಗ್ ರಸ್ತೆ ಜಂಕ್ಷನ್ ಗೆ ಬಂದು, ಲಕ್ಕಪ್ಪ ಸರ್ಕಲ್ಗೆ ತಲುಪಬೇಕು. ಲಕ್ಕಪ್ಪ ಸರ್ಕಲ್ ಕಡೆಯಿಂದ ಸದಾಶಿವನಗರ, ಬನಶಶಂಕರಿ, ಎಸ್.ಎಸ್.ಐ.ಟಿ.ಕಾಲೇಜಿನ ಕಡೆಗೆ ಹೋಗುವ ಸವಾರರು ಲಕ್ಕಪ್ಪ ಸರ್ಕಲ್ ನಿಂದ ಗುಬ್ಬಿ ರಿಂಗ್ ರಸ್ತೆ ಜಂಕ್ಷನ್ ತಲುಪಿ. ಅಲ್ಲಿಂದ ದಾನಾ ಪ್ಯಾಲೇಸ್ ಸಿಗ್ನಲ್ ಗೆ ಬಂದು. ಹೇಮಾವತಿ ಕಛೇರಿ ರಸ್ತೆಯಿಂದ ಸದಾಶಿವನಗರ, ಬನಶಂಕರಿ, ಎಸ್.ಎಸ್.ಐ.ಟಿ. ಕಡೆಗೆ ಹೋಗುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದು ಪ್ರಜಾಶಕ್ತಿ ಟಿವಿಯ ವರದಿಯ ಬಿಗ್ ಇಂಪ್ಯಾಕ್ಟ್.