ಬೆಂಗಳೂರು: ವಿಧಾನಸಭೆಯಿಂದ ಅಮಾನತುಗೊಂಡಿದ್ದ ಬಿಜೆಪಿಯ 18 ಶಾಸಕರ ಅಮಾನತನ್ನು ವಾಪಸ್ ಪಡೆಯುವ ಕುರಿತು ಸ್ಪೀಕರ್ ಯು ಟಿ ಖಾದರ್ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷ ನಾಯಕರು ಹಾಗೂ ವಿವಿಧ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಲಾಯಿತು.
ಮಾರ್ಚ್ 21, 2025 ರಂದು ನಡೆದ ವಿಧಾನಸಭಾ ಕಲಾಪದ ವೇಳೆ ಶಿಸ್ತು ಭಂಗದ ಆರೋಪದ ಮೇಲೆ ಈ 18 ಮಂದಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಸಭೆಯಲ್ಲಿ ವಿಪಕ್ಷ ನಾಯಕರು ತೋರಿದ್ದ ಅಹಿತಕರ ವರ್ತನೆ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಅಮಾನತು ಆದೇಶ ಹೊರಡಿಸಿದ್ದರು.
ಇದೀಗ, ಶಾಸಕಾಂಗ ಕಾರ್ಯಚಟುವಟಿಕೆಗಳು ಸಹಜಗತಿಗೆ ಬರಲಿ ಎಂಬ ಉದ್ದೇಶದಿಂದ ಹಾಗೂ ಎಲ್ಲಾ ಪಕ್ಷಗಳ ಸಹಕಾರದೊಂದಿಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸಿ ಅಮಾನತನ್ನು ಹಿಂತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ. ನಾಳೆ ಈ ಬಗ್ಗೆ ಸ್ಪೀಕರ್ ಅಧಿಕಾರಿಗಳ ಸಭೆ ಕರೆದು ಅಧಿಕೃತವಾಗಿ ಆದೇಶ ಹೊರಡಿಸಲಿದ್ದಾರೆ ಎನ್ನಲಾಗಿದೆ.