ಕ್ರಿಕೆಟ್:
ಇಂದು IPL ನ 46ನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆಎಲ್ ರಾಹುಲ್ ಮತ್ತೊಮ್ಮೆ ಮುಖಾಮುಖಿಯಾಗಲಿರೋದು ವಿಶೇಷವಾಗಿದೆ.
ಎರಡೂ ತಂಡಗಳು ಪ್ಲೇಆಫ್‌ಗೆ ತಲುಪುವ ಗುರಿಯಲ್ಲಿವೆ. ಈ ಗೆಲುವಿನ ಎರಡು ಅಂಕಗಳು ಬಹಳ ಮುಖ್ಯವಾಗಿದೆ. ಇಂದು ಆರ್ಸಿಬಿ ತಂಡಕ್ಕೆ ಬಲಿಷ್ಟ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿಯಾಗಲಿವೆ. ಹೋಮ್ ಗ್ರೌಂಡ್ ಚಿನ್ನಸ್ವಾಮಿಯಲ್ಲಾದ ಸೋಲಿನ ಸೇಡು ತೀರಿಸಿಕೊಳ್ಳಲು ಪಣ ತೊಟ್ಟು ರಾಷ್ಟ್ರ ರಾಜಧಾನಿಗೆ ರೆಡ್ ಆರ್ಮಿ ಕಾಲಿಟ್ಟಿದೆ.
ಇನ್ನು ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಆರ್ಸಿಬಿ ತಂಡ 12 ಪಾಯಿಂಟ್ಸ್ನೊಂದಿಗೆ ತೃತೀಯ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವಣ ಈ ಪಂದ್ಯದಲ್ಲಿ ಗೆಲ್ಲುವ ತಂಡ ಮೊದಲ ಸ್ಥಾನಕ್ಕೇರಲಿದೆ.