Kolar : ಕೋಲಾರದಲ್ಲಿ ಎಟಿಎಂ ದೋಚಿದ ಕಳ್ಳರು | 27 ಲಕ್ಷ ರೂ. ನಗದು ದೋಚಿ ಕಳ್ಳರು ಪರಾರಿ

KOLAR: ಕೋಲಾರ ಜಿಲ್ಲೆಯ ಸಹಕಾರ ನಗರದಲ್ಲಿ ಅತಿ ಭದ್ರತೆಯನ್ನ ಹೊಂದಿರುವ ಎಸ್‌ಬಿಐ (SBI) ಎಟಿಎಂನಲ್ಲಿ ಸುಮಾರು ₹27 ಲಕ್ಷ ನಗದು ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಎಟಿಎಂ ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆ ಸಮೀಪದಲ್ಲೇ ಈ ಎಟಿಎಂ ಇದ್ದು, ಕಳ್ಳರು ಹೇಗೆ ಭದ್ರತಾ ವ್ಯವಸ್ಥೆಯಿದ್ದರು ಹಣ ದೋಚಿದರೋ ಎಂಬುದರ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ.

ತಡರಾತ್ರಿ ವೇಳೆ ಕಳ್ಳರು ಎಟಿಎಂ ಯಂತ್ರವನ್ನು ಲಾಕ್‌ ಪಿಕಿಂಗ್ ಅಥವಾ ಕಟಿಂಗ್ ಸಾಧನ ಬಳಸಿ ತೆರೆದಿರುವ ಶಂಕೆ ವ್ಯಕ್ತವಾಗಿದೆ. ಎಟಿಎಂನಲ್ಲಿ ಸದ್ಯ ₹27 ಲಕ್ಷಕ್ಕೂ ಅಧಿಕ ನಗದು ಇತ್ತು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ದೊರಕಿದ ತಕ್ಷಣ ಗಲ್ ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಕೋಲಾರ ಎಸ್‍ಪಿ ನಿಖಿಲ್ ಸೇರಿದಂತೆ ಬೆರಳಚ್ವು ತಜ್ಞರು, ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews