Kiccha sudeep :
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿಯನ್ನು ನಡೆಸಿ 28 ಜನರನ್ನು ಹತ್ಯೆಗೈದಿದ್ದರು. ಆದರೆ ಮೇ 7 ಈ ದಿನ ಪ್ರತಿಯೊಬ್ಬ ಭಾರತೀಯರ ಪಾಲಿಗೆ ಇದೊಂದು ವಿಶೇಷ ದಿನವಾಗಿದೆ. ಏಕೆಂದರೆ ಪಹಲ್ಗಾಮ್ ದಾಳಿಯ ಪ್ರತೀಕಾರವನ್ನು ಭಾರತ ಇಂದು ತೀರಿಸಿಕೊಂಡಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಉಗ್ರರ ಅಡಗು ತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಇದಕ್ಕೆ ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸೇನೆಯ ಕ್ರಮದ ಬಗ್ಗೆ ಮೆಚ್ಚುಗೆಯನ್ನು ಹೊರಹಾಕಿದ್ದಾರೆ.
ಪಹಲ್ಗಾಮ್ ದಾಳಿ ಆದಾಗ ಸುದೀಪ್ ಸಂತಾಪ ಸೂಚಿಸಿದ್ದರು, ಆದರೆ ಇದೀಗ ಸಿಂಧೂರ ಆಪರೇಷನ್ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು ಒಬ್ಬ ಭಾರತೀಯನಾಗಿ ಪವಿತ್ರ ಭೂಮಿಯ ಮಗನಾಗಿ ಹಲ್ಗಾಮ್ ನಲ್ಲಿ ನಡೆದ ಘಟನೆ ನನಗೆ ನೋವನ್ನು ತಂದಿತ್ತು. ಆದರೆ ಇದೀಗ ನನಗೆ ನ್ಯಾಯ ಸಿಕ್ಕಂತೆ ಅನಿಸುತ್ತಿದೆ. ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ, ಬದಲಾಗಿ ಒಂದು ಪವಿತ್ರ ಪ್ರತಿಜ್ಞೆ ಎಂದು ಸುದೀಪ್ ಹೇಳಿದ್ದಾರೆ. ಅಲ್ಲದೇ ನಮ್ಮ ಯೋಧರು ಸಿಂಧೂರದ ಗೌರವವನ್ನು ಬೆಂಕಿ ಹಾಗೂ ನಿಖರತೆಯೊಂದಿಗೆ ಮತ್ತೆ ತಂದಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ಅನಂತ ವಂದನೆಗಳು ಎಂದಿದ್ದು. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಇಲಾಖೆಗೆ ಧನ್ಯವಾದವನ್ನು ಭಾರತ ಮರೆಯುವುದಿಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.