ಬೆಂಗಳೂರು :
ಪಹಲ್ಗಾಮ್‌ನಲ್ಲಿ ಉಗ್ರರ ನರಮೇಧದ ಬಳಿಕ ದೇಶಾದ್ಯಂತ ಪಾಪಿ ಪಾಕಿಸ್ತಾನದ ಉಗ್ರರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿತ್ತು. ಪಾಕಿಸ್ತಾನ- ಭಾರತದ ನಡುವೆ ಯುದ್ಧದ ವಾತಾವರಣ ಏರ್ಪಟ್ಟ ಹಿನ್ನೆಲೆ ಅಮಾಯಕ ಜನರನ್ನು ಯುದ್ಧದಿಂದ ಹೇಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಅನ್ನೋದಕ್ಕೆ ದೇಶಾದ್ಯಂತ ಇಂದು ಮಾಕ್ ಡ್ರಿಲ್ ನಡೆಸಲಾಯಿತು. ಉಗ್ರರು ಬೆಂಗಳೂರಿನ ಮೇಲೂ ಯುದ್ಧ ಮಾಡಬಹುದು ಅಂತಾ ಭಾವಿಸಿ, ಬೆಂಗಳೂರಿನ 35 ಕಡೆ ಮಾಕ್ ಡ್ರಿಲ್ ನಡೆಸಲಾಯಿತು.
ಬೆಂಗಳೂರು ನಗರದಲ್ಲಿ ಮಧ್ಯಾಹ್ನ 3 ಗಂಟೆ 58 ನಿಮಿಷಕ್ಕೆ ಸರಿಯಾಗಿ ನಗರದ ಸುಮಾರು 35 ಕಡೆಗಳಲ್ಲೂ, 2 ನಿಮಿಷಗಳ ಕಾಲ ಸೈರನ್ ಮೊಳಗಿದ್ದು, ಸ್ಥಳೀಯರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮಾಕ್ ಡ್ರಿಲ್ ನಾಗರೀಕರ ರಕ್ಷಣಾ ಅಣಕು ಪ್ರದರ್ಶನ ಇದಾಗಿದ್ದು, ಮೊದಲಿಗೆ ಹಲಸೂರು ಕೆರೆಯಲ್ಲಿ ಬೋಟಿಂಗ್ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ನಡೆಸಲಾಯಿತು. ನಂತರ ಸೈರನ್ ಮೊಳಗಿಸಲಾಯಿತು.
ಸೈರಿಂಗ್ ಅಣಕು ಪ್ರದರ್ಶನದ ಬಳಿಕ ಫೈರಿಂಗ್ ಗೆಸ್ಟ್ ಹೌಸ್, ಬೆಂಕಿ ಹಾಗೂ ವಾಯು ದಾಳಿ ವೇಳೆ ನಾಗರೀಕರನ್ನು ಹೇಗೆ ರಕ್ಷಣೆ ಮಾಡಲಾಗುವುದು ಅಂತಾ ಮಾಕ್ ಡ್ರಿಲ್ ಮಾಡುವ ಮೂಲಕ ನಾಗರೀಕರಿಗೆ ಮಾಹಿತಿ ನೀಡಲಾಯಿತು. ಜೊತೆಗೆ ಬಿಲ್ಡಿಂಗ್‌ನಲ್ಲಿ ಸಿಲುಕಿಕೊಂಡವರನ್ನು, ಗಾಯಾಳುಗಳನ್ನು ಹೇಗೆ ರಕ್ಷಣೆ ಮಾಡಲಾಗುತ್ತೆ ಮತ್ತು ಆ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಹೇಗೆ ರಕ್ಷಣೆ ಮಾಡಲಾಗುತ್ತೆ ಅನ್ನೋದನ್ನು ಕೂಡ ಮಾಕ್ ಡ್ರಿಲ್ ಮೂಲಕ ನಾಗರಿಕರಿಗೆ ಮಾಹಿತಿ ನೀಡಲಾಯಿತು.
ಭಾರತ- ಪಾಕ್ ನಡುವೆ ಯುದ್ಧಕ್ಕೆ ಭಾರತ ಸಿದ್ಧವಾಗಿದ್ದು, ಅದರ ಅಂಗವಾಗಿ ಇಂದು ನಡೆದ ಮಾಕ್ ಡ್ರಿಲ್ ಬಹುತೇಕ ಯಶಸ್ವಿಯಾಗಿದ್ದು, ಪಾಕ್ ವಿರುದ್ಧ ತೊಡೆ ತಟ್ಟಿ ಭಾರತ ಸೇನೆ ನಿಂತಿದೆ. ಬೆಂಗಳೂರಿನ ಮೇಲೂ ಪಾಕ್ ಅಟ್ಯಾಕ್ ಮಾಡಿದರೂ, ಬೆಂಗಳೂರಿಗರ ರಕ್ಷಣೆಗೆ ಇಲಾಖೆ ಈಗಲೇ ಸಿದ್ದವಾಗಿದ್ದು, ನಾಗರೀಕರ ಆತಂಕವನ್ನು ಕೊಂಚ ದೂರ ಮಾಡಿದಂತಾಗಿದೆ.