ಜಮ್ಮು ಕಾಶ್ಮೀರ : ಪ್ರಪಾತಕ್ಕೆ ಬಿದ್ದ ಸೇನಾ ವಾಹನ | ಮೂವರು ಸೈನಿಕರು ಸಾವು

ಜಮ್ಮು ಕಾಶ್ಮೀರ :

ಜಮ್ಮು ಕಾಶ್ಮೀರದ ರಾಂಬನ್‌ ನಲ್ಲಿ ಸೇನಾ ವಾಹನ 700 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು, ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ. ಮೃತ ಸೈನಿಕರನ್ನು ಅಮಿತ್‌ ಕುಮಾರ್‌, ಸುಜಿತ್‌ ಕುಮಾರ್‌ ಮತ್ತು ಮನ್‌ ಬಹದ್ದೂರ್‌ ಎಂದು ಗುರುತಿಸಲಾಗಿದೆ.

ಜಮ್ಮು ಕಾಶ್ಮೀರ್‌ ಬ್ಯಾಟರಿ ಚಶ್ಮಾ ಬಳಿ ಈ ಅಪಘಾತ ಸಂಭವಿಸಿದೆ. ಸೇನಾ ವಾಹನವು ಜಮ್ಮುವಿನಿಂದ ಶ್ರೀ ನಗರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸೇನಾ ವಾಹನ ಬಿದ್ದ ರಭಸಕ್ಕೆ ಛಿದ್ರಗೊಂಡಿದೆ. ಘಟನಾ ಸ್ಥಳಕ್ಕೆ ಜಮ್ಮು ಕಾಶ್ಮೀರದ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews