India : ದೇಶದೆಲ್ಲೆಡೆ ನಾಳೆ ಮಾಕ್ ಡ್ರಿಲ್ | ಇದನ್ನ ಮಾಡೋದು ಏಕೆ ಗೊತ್ತಾ?

India :

ಕಾಶ್ಮೀರದಲ್ಲಿ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಪ್ರಧಾನಿ ಮೋದಿ ರಾಜತಾಂತ್ರಿಕ ಮಾರ್ಗವನ್ನು ಹಿಡಿದು ಪಾಕ್‌ ಗೆ ಪೆಟ್ಟಿನ ಮೇಲೆ ಪಟ್ಟು ಕೊಡ್ತಿದೆ. ಇದರ ನಡುವೆ ದೇಶ ಮೂರು ಪಡೆಗಳ ಮುಖ್ಯಸ್ಥರಿಗೆ ಯುದ್ಧ ಸಂಬಂಧ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಇದರ ನಡುವೆ ನಾಳೆ ದೇಶಾದ್ಯಂತ ಮಾಕ್‌ ಡ್ರಿಲ್‌ ಅಣಕು ಪ್ರದರ್ಶನ ಮಾಡಲು ಸೂಚಿಸಲಾಗಿತ್ತು. ಅದರಂತೆ ಇಂದು ಕಾಶ್ಮೀರ ಕೆಲವು ಭಾಗಗಳಲ್ಲಿ ಮಾಕ್‌ ಡ್ರಿಲ್‌ ಅಣಕು ಪ್ರದರ್ಶನದ ಪ್ರಾಕ್ಟಿಸ್‌ ನಡೀತಾ ಇದೆ.

ಭಾರತ ಪಾಕ್‌ ನಡುವೆ ಯುದ್ಧ ಸನ್ನಿತವಾಗ್ತಿದೆ ಅನ್ನೋ ಮಾತಿದೆ. ಇದರ ಬೆನ್ನಲ್ಲೆ ದೇಶದ ಮೂಲೆ ಮೂಲೆಯಲ್ಲಿ ಕಟ್ಟೆಚ್ಚರವಹಿಸಲಾಗ್ತಿದೆ. ದೇಶದ ನಾಲ್ಕು ಗಡಿ ಭಾಗಗಳಲ್ಲಿಯೂ ಮಿಲಿಟರಿ ಪಡೆ ಸಜ್ಜಾಗಿ ನಿಂತಿದೆ. ಇತ್ತ ಮಧ್ಯಪ್ರದೇಶದಲ್ಲಿ ಗಂಗಾ ಎಕ್ಸ್‌ಪ್ರೆಸ್‌ ರನ್‌ ವೇ ನಲ್ಲಿ ವಾಯುಪಡೆಯ ಯುದ್ಧವಿಮಾನಗಳು ಹಗಲು ರಾತ್ರಿ ಟೇಕಾಪ್‌ ಅಂಡ್‌ ಲ್ಯಾಡಿಂಗ್‌ ಕಸರಸ್ತು ನಡೆಸಿದ್ದವು. ಇನ್ನು ಬಾರ್ಡ್‌ರ್‌ ನಲ್ಲಿ ರೆಜಿಮೆಂಟ್‌ಗಳು ಯುದ್ಧ ಎದುರಿಸೋಕೆ ಸನ್ನದ್ಧರಾಗಿದ್ದಾರೆ.

ಇದೆಲ್ಲದರ ನಡುವೆ ಇಂದು ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ಮಾಕ್‌ ಡ್ರಿಲ್‌ ಅಣಕು ಪ್ರದರ್ಶನವನ್ನು ನಡೆಸುತ್ತಿವೆ. ಪರಿಸ್ಥಿತಿ ನಿಯಂತ್ರಣ ಮತ್ತು ನಾಗರೀಕರ ರಕ್ಷಣೆಗಾಗಿ ದೇಶಾದ್ಯಂತ ಅಣಕು ತಾಲೀಮು ನಡೆಸಲಾಗ್ತಿದೆ. ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ರೈಲ್ವೆ ಸ್ಟೇಷನ್‌, ಪ್ರಮುಖ ಹಡಗು ನಿಲ್ದಾಣ. ಹೀಗೆ ಕೆಲವು ಪ್ರದೇಶಗಳಲ್ಲಿ ಪೂರ್ವಭಾವಿ ಮಾಕ್‌ ಡ್ರಿಲ್‌ ಅಣಕು ಪ್ರದರ್ಶನ ನಡೆಸಲಾಗುತ್ತಿದೆ..

ಒಂದು ವೇಳೆ ಪಾಕ್‌ ಮತ್ತು ಭಾರತದ ನಡುವೆ ಯುದ್ಧ ನಡೆದಿದ್ದೆ ಆದರೆ, ಶಾಲಾ-ಕಾಲೇಜು, ಕಚೇರಿ, ಮನೆ, ಸಾರ್ವಜನಿಕ ಸ್ಥಳ, ಹಡಗು ನಿಲ್ದಾಣಗಳಲ್ಲಿ ಹೇಗೆ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಬೇಕು, ಹಾಗೇ ರಕ್ಷಣ ಪಡೆಗಳು ಯಾವ ರೀತಿ ಜನರ ರಕ್ಷಣೆಗೆ ಮುಂದಾಗಬೇಕು ಅನ್ನೋ ಮಾಕ್‌ ಡ್ರಿಲ್‌ ಮಾಡಲಾಗ್ತಿದೆ. ಕೇಂದ್ರ ಗೃಹ ಇಲಾಖೆಯ ಆದೇಶವನ್ನು ದೇಶದ ಎಲ್ಲ ಕಡೆಗಳಲ್ಲಿಯೂ ಕಟ್ಟುನಿಟ್ಟಾಗಿ ಫಾಲೋ ಮಾಡಲಾಗ್ತಿದೆ. ನಾಳೆ ಇಡೀ ದೇಶದಾದ್ಯಂತ ಮಾಕ್‌ ಡ್ರಿಲ್‌ ಪ್ರದರ್ಶನ ನಡೆಸಲಾಗುತ್ತೆ. ದೇಶಾದ್ಯಂತ ಒಟ್ಟು 259 ಪ್ರದೇಶಗಳಲ್ಲಿ ಮಾಕ್‌ ಡ್ರಿಲ್‌ ಮಾಡಲು ಪ್ರದೇಶಗಳನ್ನು ಗುರುತಿಸಲಾಗಿದೆ. ಇದ್ರಲ್ಲಿ ಮೊದಲ ಭಾಗವಾಗಿ 13 ಪ್ರದೇಶಗಳು, ಎರಡನೇ ಭಾಗದಲ್ಲಿ 201 ಪ್ರದೇಶಗಳು, 3 ನೇ ಭಾಗವಾಗಿ 35 ಪ್ರದೇಶಗಳನ್ನು ಗುರುತಿಸಿ ಮಾಕ್‌ ಡ್ರಿಲ್‌ ಮಾಡಲಾಗ್ತಿದೆ.

Author:

...
Sushmitha N

Copy Editor

prajashakthi tv

share
No Reviews