ದೇಶ: ಪಾಕ್‌ ಗೆ ಮತ್ತೊಂದು ಶಾಕ್‌ ಕೊಟ್ಟ ಭಾರತ | ರೇಡಿಯೋ ಪ್ರಸಾರ ಬಂದ್‌

ದೇಶ: 

ಪಾಕಿಸ್ತಾನ ಉಗ್ರರ ದಾಳಿ ಖಂಡಿಸಿ ಭಾರತವು ಪಾಕಿಸ್ತಾನಕ್ಕೆ ಶಾಕ್‌ ಮೇಲೆ ಶಾಕ್‌ ನೀಡುತ್ತಿದೆ. ಭಾರತದಲ್ಲಿ ಪ್ರಸಾರವಾಗುತ್ತಿದ್ದ 16 ಯೂಟ್ಯೂಬ್‌ ಚಾನಲ್‌ ಬಂದ್‌ , ಪಾಕಿಸ್ತಾನದ ರಕ್ಷಣ ಸಚಿವ ಖ್ವಾಜಾ ಆಸೀಪ್‌ ಇನ್ಸ್ಟಾ ಗಾಮ್‌ ಅನ್ನು ದೇಶದಲ್ಲಿ ಬ್ಲಾಕ್‌, ನಂತರ ಭಾರತೀಯ ಸೇನೆ, ನೌಕಪಡೆ, ವಾಯುಪಡೆಯ ದಾರಿಯನ್ನು ಸಂಪೂರ್ಣವಾಗಿತ್ತು ಮುಚ್ಚಿತ್ತು. ಇದೀಗ ಭಾರತದ ರೇಡಿಯೋವನ್ನು ಪಾಕಿಸ್ತಾನದಲ್ಲಿ ಬಂದ್‌ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದ್ರಿಂದ ಪಾಕ್‌ಗೆ ಮತ್ತೊಂದು ಪೆಟ್ಟು ಬಿದ್ದಂತಾಗಿದೆ.

ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಗೆ ಪಾಕಿಸ್ತಾನ ವಿರುದ್ಧ ಭಾರತ ಒಂದರಮೇಲೆ ಒಂದರಂತೆ ಶಾಕ್‌ ಕೋಡ್ತಾ ಬರ್ತಿದೆ. ಈ ದಾಳಿಯಲ್ಲಿ ಜಾಲಿ ಟ್ರಿಪ್‌ಗೆಂದು ಹೋದ 26 ಜನ ಉಗ್ರರು ಕೊಲೆಗೈದಿದ್ರು.  ಇದರ ಬೆನ್ನಲ್ಲೆ ದೇಶದೆಲ್ಲೆಡೆ ಆಕ್ರೋಶ ಭುಗಿಲೆದ್ದಿತ್ತು. ದೇಶದಾದ್ಯಂತ ವಿವಿಧ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸಿದ್ವು. ಇದರ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿಯವರು ರಾಜತಾಂತ್ರಿಕ ಯುದ್ಧಕ್ಕೆ ಮುಂದಾದ್ರು. ಇದೇ ನಿಟ್ಟಿನಲ್ಲಿ ಪಾಕ್‌ಗೆ ಶಾಕ್‌ ಮೇಲೆ ಶಾಕ್‌ ಎಂಬಂತೆ ಹಲವು ರೀತಿಯಲ್ಲಿ ಹೊಡೆತ ನೀಡ್ತಾ ಬರ್ತಾ ಇದೆ.

ಇನ್ನು ಪಾಕಿಸ್ತಾನದಲ್ಲಿ ಭಾರತದ ಬಾಲಿವುಡ್‌ ಗೀತಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಬಾಲಿವುಡ್‌ ಗೀತೆಗಳನ್ನ ಕೇಳೋದಂದ್ರೆ ಪಾಕಿಸ್ತಾನಿಗಳಿಗೆ ಅಚ್ಚುಮೆಚ್ಚು. ಆದ್ರೆ ಇಂತಹದೊಂದು ಮನೋರಂಜನೆಗೆ ಭಾರತ ಬ್ರೇಕ್‌ ಹಾಕಲು ಯೋಚಿಸಿತ್ತು. ಅದೇ ರೀತಿ ಪಾಕಿಸ್ತಾನದಲ್ಲಿ ಪ್ರಸಾರವಾಗುತ್ತಿದ್ದ ರೇಡಿಯೋವನ್ನು ಸಂಪೂರ್ಣವಾಗಿ ನಿಷೇದಿಸಿ ಆದೇಶ ಹೊರಡಿಸಿದೆ. ಈಗಾಗಲೇ ಭಾರತ ಪಾಕಿಸ್ತಾನದ ನಡುವೆ ಯುದ್ಧ ನಡೆದೆ ನಡೆಯುತ್ತೆ ಅನ್ನೋ ವಿಚಾರ ಎಲ್ಲೆಡೆ ಚರ್ಚೆಯಾಗ್ತಾ ಇದೆ. ಈ ನಡುವೆ ಭಾರತ ರಾಜತಾಂತ್ರಿಕವಾಗಿ ಪಾಕ್‌ ಗೆ ಮತ್ತೊಂದು ಶಾಕ್‌ ನೀಡಿದೆ. ಪಾಕಿಸ್ತಾನದ ಮರೋಂಜನೆಗೆ ಪೆಟ್ಟು ಕೊಟ್ಟಿರುವ ಭಾರತ ಪಾಕಿಸ್ತಾನದ ಕಲಾವಿದರಿಗೆ ನಿಷೇಧ ಹೇರಿದೆ. ಅತ್ತ ಪಾಕಿಸ್ತಾನದಲ್ಲಿ ಪ್ರಸಾರವಾಗುತ್ತಿದೆ ಮನರಂಜನಾ ಕಂಟೆಂಟ್‌ಗಳಿಗೂ ಬ್ರೇಕ್‌ ಹಾಕಿದೆ. ಪಾಕಿಸ್ತಾನದಲ್ಲಿ ಭಾರತದ ಹಾಡುಗಳನ್ನು ಪ್ರಸಾರ ಮಾಡದಂತೆ ಎಫ್‌ಎಂ ಸ್ಟೇಷನ್‌ಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ.

ಪಾಕಿಸ್ತಾನದಲ್ಲಿ ಭಾರತದ ಹಾಡುಗಳಿಗೆ ನಿಷೇಧ ಹೇರಿದ ಬೆನ್ನಲ್ಲೆ ಅತ್ತ ಪಾಕಿಸ್ತಾನ್ ಬ್ರಾಡ್​ಕಾಸ್ಟರ್ ಒಕ್ಕೂಟವು (ಪಿಬಿಎ) ಭಾರತದ ಹಾಡುಗಳ ಪ್ರಸಾರ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಈ ನಿರ್ಧಾರವನ್ನು ಅಲ್ಲಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸ್ವಾಗತಿಸಿದೆ. ಸಿನಿಮಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಭಾರತ ಮತ್ತು ಪಾಕ್ ನಡುವೆ ಮೊದಲಿನಿಂದಲೂ ಒಳ್ಳೆಯ ಸಂಪರ್ಕವಿತ್ತು. ಆದ್ರೆ ಇದೀಗ ಪಾಕಿಸ್ತಾನದ ಉಗ್ರರು ತೋರಿದ ಅಟ್ಟಹಾಸಕ್ಕೆ ಭಾರತ ಪ್ರತೀಕರಾದ ಜ್ವಾಲೆಯಲ್ಲಿ ಬಿದ್ದು ಪಾಕಿಸ್ತಾನದ ಸಂಪೂರ್ಣ ಶಕ್ತಿಯನ್ನು ಕುಂದಿಸುವತ್ತ ದಿಟ್ಟ ಹೆಜ್ಜೆಯನ್ನು ಇಡುತ್ತಿದೆ.

Author:

...
Keerthana J

Copy Editor

prajashakthi tv

share
No Reviews