ಶಿರಾ :
ಶಿರಾ ತಾಲೂಕಿನ ಚಂಗಾವರ ಹೋಬಳಿಯ ಹೊಸೂರು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಸತಿ ಯೋಜನೆಯಡಿ ಮನೆ ಹಂಚಿಕೆ ನಡೆಸಿರೋದು ಬಟಾಬಯಲಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾದ ಮನೆಗಳನ್ನು ಸಾಮಾನ್ಯ ವರ್ಗದ ಜನರಿಗೆ ಹಂಚಿಕೆ ಮಾಡಲಾಗಿದೆ. ಜೊತೆಗೆ ಸರ್ಕಾರದ ನಿಯಮದ ಮನೆಗಳ ನಿರ್ಮಾಣಕ್ಕೆ ಇಂತಿಷ್ಟೇ ನಿಯಮಗಳಿವೆ. ಆದ್ರೆ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಜಿಪಿಎಸ್ ಮಾಡಿಸಿ ಬಿಲ್ ಎತ್ತಲಾಗಿದೆ ಎಂದು ಸ್ಥಳೀಯರು ಆರೋಪ ಮಾಡ್ತಾ ಇದ್ದಾರೆ.
ಇದರ ಜೊತೆಗೆ ಕೆರೆಗೆ ಸೇರಿರುವ ಜಮೀನನ್ನು ಅಕ್ರಮವಾಗಿ ಬೇರೆಯವರು ಮನೆ ನಿರ್ಮಾಣ ಮಾಡಲು ಪರ್ಮಿಷನ್ ನೀಡಲಾಗಿದೆ. ಒಂದು ಕೆರೆ ಉಳಿಸಿಕೊಡಿ ಇಲ್ಲವಾದ್ರೆ ಕೆರೆ ಪೂರ್ತಿಯನ್ನು ಅವರಿಗೆ ಬಿಟ್ಟುಕೊಡಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೊಸೂರು ಗ್ರಾಮ ಪಂಚಾಯ್ತಿ ಆವರಣ ಕಸದ ತೊಟ್ಟಿಗೆ ಪರಿಣಮಿಸಿದೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದಿದ್ರು ಕೂಡ ಅಧಿಕಾರಿಗಳು ಮಾತ್ರ ಕಸವನ್ನು ಎತ್ತುವ ಕೆಲಸ ಮಾಡ್ತಾ ಇಲ್ಲ. ತಮ್ಮ ಕಚೇರಿಯನ್ನೇ ಇಷ್ಟು ಅಸ್ವಚ್ಛವಾಗಿ ಇಟ್ಟುಕೊಂಡ್ರೆ ಇನ್ನು ಗ್ರಾಮಗಳಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡುತ್ತೆ ಅನ್ನೋದು ಪ್ರಶ್ನೆಯಾಗಿದೆ. ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಇಷ್ಟೆಲ್ಲ ಕರ್ಮಕಾಂಡಗಳಿದ್ದು ಮೇಲ್ಪಟ್ಟದ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.