MOVIE: ಕನ್ನಡಿಗರ ಭಾವನೆಗೆ ಧಕ್ಕೆ | ಸೋನು ನಿಗಮ್‌ ವಿರುದ್ಧ ದೂರು

ಸಿನಿಮಾ: 

ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜನಪ್ರಿಯ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ರಕ್ಷಣ ವೇದಿಕೆಯಿಂದ ದೂರು ದಾಖಲಿಸಲಾಗಿದೆ.

ಗಾಯಕ ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿವೆ. ಕರ್ನಾಟಕದ ವಿವಿಧ ಭಾಷಾ ಸಮುದಾಯಗಳಲ್ಲಿ ದ್ವೇಷವನ್ನು ಪ್ರಚೋದಿಸುವ ಸಾಧ್ಯತೆ ಇದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಏಪ್ರಿಲ್ 25-26ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ವಿವಾದಾತ್ಮಕ ಹೇಳಿಕೆ ನೀಡಿದ್ರು. ಅವರ ಹೇಳಿಕೆ ಅತ್ಯಂತ ಆಕ್ಷೇಪಾರ್ತಹ ಮತ್ತು  ಭಾವನಾತ್ಮಕವಾಗಿ  ಪ್ರಚೋದನಕಾರಿಯಾಗಿದೆ ಎಂದು ದೂರು ದಾಖಲಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ. ದೂರು ದಾಖಲಿಸಿದ್ದಾರೆ.

"ಕನ್ನಡ, ಕನ್ನಡ, ಕನ್ನಡ, ಇದೇ ಕಾರಣದಿಂದಾಗಿ ಪಹಲ್ಗಾಮ್​ನಲ್ಲಿ ಅಂತಹ ಘಟನೆ ನಡೆದಿದ್ದು" ಎಂದು ಹೇಳಿರುವುದು ವಿಡಿಯೋ ದಲ್ಲಿದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅವರು ಉಲ್ಲೇಖಿಸಿರು ವುದನ್ನು ವಿರೋಧಿಸಿ ದೂರು ದಾಖಲಿಸಲಾಗಿದೆ.

Author:

...
Keerthana J

Copy Editor

prajashakthi tv

share
No Reviews